ಬನ್ನೇರುಘಟ್ಟದಲ್ಲಿ ನಡೆದ ದುರ್ಘಟನೆಯಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಮಂಜು ಪ್ರಕಾಶ್ (34) ಹಾವು ಕಚ್ಚಿದ ಪರಿಣಾಮ ದುರ್ಮರಣ ಹೊಂದಿದ್ದಾರೆ.

ಮಂಜು ಪ್ರಕಾಶ್ ಕ್ರಾಕ್ಸ್ ಚಪ್ಪಲಿ ಹಾಕಿಕೊಂಡು ಪೇಟೆಗೆ ಹೋಗಿ, ಮನೆಗೆ ಮರಳಿ ಬಂದು ಕೊಠಡಿಯಲ್ಲಿ ಮಲಗಿದ್ದರು. ಸ್ವಲ್ಪ ಸಮಯದ ನಂತರ ಆ ಚಪ್ಪಲಿಯೊಳಗೆ ಹಾವು ಸೇರಿಕೊಂಡಿರುವುದನ್ನು ಕುಟುಂಬದವರು ಗಮನಿಸಿದರು. ತಕ್ಷಣವೇ ಕೊಠಡಿಗೆ ಹೋಗಿ ನೋಡಿದಾಗ, ಮಂಜು ಪ್ರಕಾಶ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದು ಕಂಡುಬಂತು.
ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.


