ಭರತನಾಟ್ಯದ ವೇದಿಕೆಯಲ್ಲಿ ಹೊಸ ಇತಿಹಾಸ ಬರೆಯಲಾಗಿದೆ. ಉಡುಪಿ ಮೂಲದ ಯುವ ವಿದುಷಿ ದೀಕ್ಷಾ ವಿ. ಅವರು, ಮಂಗಳೂರಿನ ರೆಮೋನಾ ಎವೆಟ್ ಪೆರೇರಾ ಅವರ 170 ಗಂಟೆಗಳ ವಿಶ್ವ ದಾಖಲೆಯನ್ನು ಮುರಿದು, 216 ಗಂಟೆಗಳ ನಿರಂತರ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ ಹಾಕಿದ್ದಾರೆ.

ಅವರು ಈಗಾಗಲೇ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಇದ್ದ ಹಳೆಯ ದಾಖಲೆಯನ್ನು ದಾಟಿ ಮುನ್ನಗ್ಗುತ್ತಿದ್ದಾರೆ.
“ನವರಸ ದೀಕ್ಷಾ ವೈಭವಂ” ಎಂಬ ಶೀರ್ಷಿಕೆಯಡಿ ನಡೆದ ಈ ವಿಶಿಷ್ಟ ನೃತ್ಯಯಜ್ಞವು, ಉಡುಪಿಯ ಅಜ್ಜರಕಾಡಿನ ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಆಗಸ್ಟ್ 21ರಿಂದ 30ರವರೆಗೆ ನಡೆಯಲಿದೆ.
ಇಂದು 7ನೇ ದಿನ, ದೀಕ್ಷಾ ರೆಮೋನಾ ಅವರ 170 ಗಂಟೆಗಳ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಪ್ರತಿ ಮೂರು ಗಂಟೆಗಳಿಗೆ ಕೇವಲ 15 ನಿಮಿಷಗಳ ವಿಶ್ರಾಂತಿಯೊಂದಿಗೆ, ಅವರು ಒಟ್ಟು 9 ದಿನಗಳ ಕಾಲ ನಿರಂತರ ನತ್ತ ಹೆಜ್ಜೆಗಳನ್ನು ಹಾಕಲಿದ್ದಾರೆ.
ಹಿಂದೆ, ಜುಲೈ 21ರಿಂದ 28ರವರೆಗೆ 170 ಗಂಟೆಗಳ ನಿರಂತರ ನೃತ್ಯ ನಡೆಸಿ ರೆಮೋನಾ ನಿರ್ಮಿಸಿದ ದಾಖಲೆ, ಕೇವಲ ಒಂದು ತಿಂಗಳೊಳಗೆ ಅಳಿದು ಹೋಗಿದೆ.

