ಮೈಸೂರು ದಸರಾ 2025ರ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪ್ರಶ್ನಿಸಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಅವರು –“ದಸರಾ ಧಾರ್ಮಿಕ ಆಚರಣೆ, ಇದು ಜಾತ್ಯಾತೀತ ಪ್ರತೀಕ ಅಲ್ಲ.

ಪ್ರಶಸ್ತಿ ಬಂದವರನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ಕರೆಯುದಾದರೆ ರಿಷಬ್ ಶೆಟ್ಟಿ ಅವರನ್ನು ಕರೆಯಿರಿ. ಅವರು ಆದರೆ ಧಾರ್ಮಿಕ ವಿಚಾರವಿರುವ ಚಲನಚಿತ್ರ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
ಬಾನು ಮುಷ್ತಾಕ್ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ಇದೆ, ಅದಕ್ಕೆ ಗೌರವ ಕೊಡಲಿ. ಆದರೆ ದಸರಾ ಉದ್ಘಾಟನೆ ಧಾರ್ಮಿಕತೆಯ ಪ್ರತೀಕವಾಗಿರುವುದರಿಂದ ಅವರಿಗೆ ಅದಕ್ಕೆ ಸಂಬಂಧವಿಲ್ಲ,” ಎಂದು ಹೇಳಿದರು.
ಬಾನು ಮುಷ್ತಾಕ್ ತಾಯಿ ಚಾಮುಂಡಿಗೆ ಭಕ್ತಿ ತೋರಿದ್ದಾರೆಯಾ? ದಸರಾ ದೇವಿ ಆರಾಧನೆಗೆ ಸಂಬಂಧಿಸಿದ ಹಬ್ಬ. ಇದು ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರನ್ನು ಮಾಡಬಹುದು, ಆದರೆ ದಸರಾ ಉದ್ಘಾಟನೆಗೆ ಸೂಕ್ತವಲ್ಲ, ಎಂದು ಪ್ರತಾಪ್ ಸಿಂಹ ಹೇಳಿದರು.
ಇದಲ್ಲದೆ, ಅವರು ಗಿರೀಶ್ ಕಾರ್ನಾಡ್, ಬರಗೂರು ರಾಮಚಂದ್ರಪ್ಪ ಮೊದಲಾದವರನ್ನು ಹಿಂದೆಯೂ ಆಹ್ವಾನಿಸಿದ್ದನ್ನು ಉದಾಹರಿಸಿ, “ಇದು ಹಿಂದೂಗಳ ಧಾರ್ಮಿಕ ಆಚರಣೆ, ಅದನ್ನು ಸರ್ಕಾರ ಜಾತ್ಯಾತೀತದ ನೆಪದಲ್ಲಿ ಬದಲಾಯಿಸಬಾರದು,” ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

