ಸುಳ್ಯ ತಾಲೂಕಿನ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪೂರ್ವಶಿಷ್ಠ ಸಂಪ್ರದಾಯದಂತೆ 2025ರ ಆಗಸ್ಟ್ 23ರಿಂದ ಸೆಪ್ಟೆಂಬರ್ 13ರವರೆಗೆ ಪ್ರತೀ ಶನಿವಾರ ಸೋಣ ಶನಿವಾರ ಬಲಿವಾಡು ಕೂಟ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ.

ಸೇವಾ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಹ್ವಾನಿಸಲಾಗಿದೆ.
📌 ವಿಶೇಷ ಸೇವೆಗಳ ಕಾರ್ಯಕ್ರಮ (ಮಧ್ಯಾಹ್ನ):
- 23-08-2025 ಶನಿವಾರ – ಪವಮಾನ ಅಭಿಷೇಕ
- 30-08-2025 ಶನಿವಾರ – ಸರ್ವಾಲಂಕಾರ ಪೂಜೆ
- 06-09-2025 ಶನಿವಾರ – ಪಂಚಾಮೃತ ಸಹಿತ ಸಿಯಾಳ ಅಭಿಷೇಕ, ತುಳಸಿ ಅರ್ಚನೆ
- 13-09-2025 ಶನಿವಾರ – ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ

