ವಿದುಷಿ ದೀಕ್ಷಾ ವಿ. – 216 ಗಂಟೆಗಳ ನಿರಂತರ ಭರತನಾಟ್ಯ ಮೂಲಕ ವಿಶ್ವದಾಖಲೆ ಬರೆಯಲು ಸಜ್ಜು

ವಿದುಷಿ ದೀಕ್ಷಾ ವಿ. – 216 ಗಂಟೆಗಳ ನಿರಂತರ ಭರತನಾಟ್ಯ ಮೂಲಕ ವಿಶ್ವದಾಖಲೆ ಬರೆಯಲು ಸಜ್ಜು

ಉಡುಪಿ: ಭರತನಾಟ್ಯದ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿಶ್ವ ವೇದಿಕೆಗೆ ತಂದು ನಿಲ್ಲಿಸಲು ಉಡುಪಿ ಮೂಲದ ವಿದುಷಿ ದೀಕ್ಷಾ ವಿ. ಅವರು ವಿಶಿಷ್ಟ ಸಾಹಸಕ್ಕೆ ಮುಂದಾಗಿದ್ದಾರೆ. ಅವರು 216 ಗಂಟೆಗಳ (9 ದಿನಗಳ) ನಿರಂತರ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಲು ಸಜ್ಜಾಗಿದ್ದಾರೆ.

“ನವರಸ ದೀಕ್ಷಾ ವೈಭವಂ” ಎಂಬ ಶೀರ್ಷಿಕೆಯಡಿ ನಡೆಯುವ ಈ ಐತಿಹಾಸಿಕ ನೃತ್ಯಯಜ್ಞವು 2025ರ ಆಗಸ್ಟ್ 21ರಿಂದ 30ರವರೆಗೆ ಉಡುಪಿಯ ಅಜ್ಜರಕಾಡಿನ ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದೆ. ಆಗಸ್ಟ್ 21ರಂದು ಮಧ್ಯಾಹ್ನ 2 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ನಂತರ 3.30ಕ್ಕೆ ನೃತ್ಯ ಪ್ರಾರಂಭವಾಗಲಿದೆ. ಸಮಾರೋಪ ಸಮಾರಂಭವು ಆಗಸ್ಟ್ 30ರಂದು ನೆರವೇರಲಿದೆ.

ಈ ಸಾಧನೆಯ ಅವಧಿಯಲ್ಲಿ, ದೀಕ್ಷಾ ಪ್ರತಿ ಮೂರು ಗಂಟೆಗಳಿಗೆ 15 ನಿಮಿಷಗಳ ವಿರಾಮ ಪಡೆಯಲಿದ್ದಾರೆ. ಒಟ್ಟು 216 ಗಂಟೆಗಳ ನಿರಂತರ ಪ್ರದರ್ಶನದ ಮೂಲಕ, ಮಂಗಳೂರಿನ ರೆಮೋನಾ ಇವೆಟ್ ಪೆರೇರಾ ಅವರ 170 ಗಂಟೆಗಳ ದಾಖಲೆಯನ್ನು ಮೀರಿಸುವ ನಿರೀಕ್ಷೆಯಿದೆ.

ಈ ಮಹತ್ತರ ಕಾರ್ಯಕ್ರಮವನ್ನು ರತ್ನ ಸ್ನಜೀವ ಕಲಾಮಂಡಲ, ಮಣಿಪಾಲವು ಆಯೋಜಿಸಿದ್ದು, ಗುರು ವಿ. ಶ್ರೀಧರರಾವ್ ಅವರ ಮಾರ್ಗದರ್ಶನದಲ್ಲಿ, ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಬೆಂಬಲ ದೊರೆತಿದೆ.

ಅಂತರಾಷ್ಟ್ರೀಯ ಮನೋರಂಜನೆ ರಾಜ್ಯ ರಾಷ್ಟ್ರೀಯ