ಶಿಸ್ತಿನಿಂದ, ಕರ್ತವ್ಯ ಪಾಲನೆಯಿಂದ ಮತ್ತು ಬದ್ಧತೆಯಿಂದ ನಮ್ಮ ರಾಷ್ಟ್ರವನ್ನು ಉನ್ನತಿಗೇರಿಸೋಣ : ಡಾ. ಅಭಿಜ್ಞ ಕೆ.ಆರ್

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಡಾ. ಅಭಿಜ್ಞ ಕೆ.ಆರ್., ಡೈರೆಕ್ಟರ್, ಕಮಿಟಿ ಬಿ ಎ.ಒ.ಎಲ್.ಇ.(ರಿ), ಸುಳ್ಯ, ಅವರು ಧ್ವಜಾರೋಹಣ ಮಾಡುವುದರೊಂದಿಗೆ ಇಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾಭ್ಯಾಸದ ಮೂಲಕ ನಾವೆಲ್ಲರೂ ಸಮಾಜದ ನಿರ್ಮಾಣಕಾರರಾಗಬೇಕು. ಶಿಸ್ತಿನಿಂದ ಕರ್ತವ್ಯ ಪಾಲನೆಯಿಂದ ಮತ್ತು ಬದ್ಧತೆಯಿಂದ ನಮ್ಮ ರಾಷ್ಟ್ರವನ್ನು ಉನ್ನತಿಗೇರಿಸೋಣ ಎಂದು ಕರೆ ನೀಡುತ್ತಾ ಸ್ವಾತಂತ್ರ್ಯೋತ್ಸವದ ಶುಭಾಶಯವನ್ನು ಕೋರಿದರು. ವಿದ್ಯಾರ್ಥಿಗಳಾದ ಪೂಜಾ, ಹವ್ಯ ಮತ್ತು ತ್ರಿಶಾಲಿ ಹಾಗೂ ಸಾಂಸ್ಕೃತಿಕ ಸಂಯೋಜಕರಾದ ಪ್ರೊ. ಕೃಷ್ಣರಾಜ್ ಎಂ. ವಿ. ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಧ್ವಜ ವಂದನೆಯನ್ನು ಸಲ್ಲಿಸಿದರು.




ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ., ಉಪಪ್ರಾಂಶುಪಾಲ ಡಾ. ಶ್ರೀಧರ್, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರುಗಳು ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ದೈಹಿಕ ಶಿಕ್ಷಕರಾದ ಡಾ. ರಾಜೇಶ್ ಕುಮಾರ್ ಎಂ.ಎಸ್. ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.

