ಭಾರತದ ಮೊದಲ ಸ್ಲೀಪರ್ ವಂದೇ ಭಾರತ್ ರೈಲು ಸೆಪ್ಟೆಂಬರ್‌ನಲ್ಲಿ ಸಂಚಾರಕ್ಕೆ

ಭಾರತದ ಮೊದಲ ಸ್ಲೀಪರ್ ವಂದೇ ಭಾರತ್ ರೈಲು ಸೆಪ್ಟೆಂಬರ್‌ನಲ್ಲಿ ಸಂಚಾರಕ್ಕೆ

ನವದೆಹಲಿ: ಭಾರತದ ಮೊದಲ ಸ್ಲೀಪರ್ ವಂದೇ ಭಾರತ್ ರೈಲು ಈ ವರ್ಷದ ಸೆಪ್ಟೆಂಬರ್ ತಿಂಗಳಿಂದ ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ದೀರ್ಘ ದೂರದ ಪ್ರಯಾಣಿಕರ ಅನುಕೂಲಕ್ಕಾಗಿ ಆಧುನಿಕ ಸೌಲಭ್ಯಗಳೊಂದಿಗೆ ಈ ರೈಲು ವಿನ್ಯಾಸಗೊಳಿಸಲಾಗಿದೆ.

ವೇಗ, ಆರಾಮ ಮತ್ತು ಸುರಕ್ಷತೆ ಎಂಬ ಮೂರು ಪ್ರಮುಖ ಅಂಶಗಳನ್ನು ಒಳಗೊಂಡಿರುವ ಈ ಸ್ಲೀಪರ್ ವಂದೇ ಭಾರತ್ ರೈಲು, ಆಧುನಿಕ ತಂತ್ರಜ್ಞಾನ, ವಿಶಾಲ ಹಾಸಿಗೆ ವ್ಯವಸ್ಥೆ ಹಾಗೂ ಸುಧಾರಿತ ಒಳಾಂಗಣ ವಿನ್ಯಾಸದ ಮೂಲಕ ಹೊಸ ಅನುಭವ ನೀಡಲಿದೆ. ಶೀಘ್ರದಲ್ಲೇ ಮಾರ್ಗ ಮತ್ತು ಬುಕ್ಕಿಂಗ್ ವಿವರಗಳು ಪ್ರಕಟವಾಗಲಿವೆ.

ತಂತ್ರಜ್ಞಾನ ರಾಷ್ಟ್ರೀಯ