ಶ್ರೀ ಶಾರದಾರಾಮ ಸೇವಾ ಪ್ರತಿಷ್ಠಾನ (ರಿ )ಬಯಂಬು ಅಜ್ಜಾವರ ಇದರ ಆಶ್ರಯದಲ್ಲಿ,ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಜ್ಜಾವರ ಇದರ ವತಿಯಿಂದ 15ನೇ ವರ್ಷದ ಸಾಮೂಹಿಕ ಶ್ರೀವರಮಹಾಲಕ್ಷ್ಮಿ ಪೂಜೆ

ಶ್ರೀ ಶಾರದಾರಾಮ ಸೇವಾ ಪ್ರತಿಷ್ಠಾನ (ರಿ )ಬಯಂಬು ಅಜ್ಜಾವರ ಇದರ ಆಶ್ರಯದಲ್ಲಿ,ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಜ್ಜಾವರ ಇದರ ವತಿಯಿಂದ 15ನೇ ವರ್ಷದ ಸಾಮೂಹಿಕ ಶ್ರೀವರಮಹಾಲಕ್ಷ್ಮಿ ಪೂಜೆ

ಶ್ರೀ ಶಾರದಾರಾಮ ಸೇವಾ ಪ್ರತಿಷ್ಠಾನ (ರಿ )ಬಯಂಬು ಅಜ್ಜಾವರ ಇದರ ಆಶ್ರಯದಲ್ಲಿ,ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಜ್ಜಾವರ ಇದರ ವತಿಯಿಂದ 15ನೇ ವರ್ಷದ ಸಾಮೂಹಿಕ ಶ್ರೀವರಮಹಾಲಕ್ಷ್ಮಿ ಪೂಜೆಯು ವೇದಮೂರ್ತಿ ಶ್ರೀ ಸದಾನಂದ ಶಾಸ್ತ್ರೀಯವರ ನೇತೃತ್ವದಲ್ಲಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಈ ದಿನದ ಭಜನಾ ಸೇವೆಯನ್ನು ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಸದಸ್ಯರು ಮತ್ತು ಶ್ರೀದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಅಜ್ಜಾವರ ಇವರು ನಡೆಸಿಕೊಟ್ಟರು.ಬಳಿಕ ರಕ್ಷಾ ಬಂಧನಕಾರ್ಯಕ್ರಮ ನಡೆಯಿತು. ರಕ್ಷಾಬಂಧನದ ಬಗ್ಗೆ ಉಪನ್ಯಾಸವನ್ನು ಶ್ರೀಮತಿ ನಳಿನಾಕ್ಷಿ ಪ್ರಸಾದ್ ಮಾಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಭಾಸ್ಕರ ರಾವ್ ಬಯಂಬು, ಸವೇರಾ ರೈ ಬೇಲ್ಯ, ಬೆಳ್ಯಪ್ಪ ಮುಡೂರು, ಜಯಂತಿ ಜನಾರ್ಧನ,ವೇದಾವತಿ ಬಾಲಚಂದ್ರ, ಕವಿತಾ ಪುರುಷೋತ್ತಮ, ಸರಸ್ವತಿ ಚಂದ್ರ ಶೇಖರ್, ರಮ್ಯ ಶಿರಾಜೆ ಹಾಗು ಪೂಜಾ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು, ಸಲಹಾ ಸಮಿತಿ ಸದಸ್ಯರುಗಳು,ಹಾಗು ಊರ ಭಕ್ತಾದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ವಿಮಲಾರುಣ ಪಡ್ಡಂಬೈಲು ನಡೆಸಿಕೊಟ್ಟರು.

ಧಾರ್ಮಿಕ