ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಫ್ಲೈಟ್ AI-171 ಜೂನ್ 12ರಂದು ಪತನಗೊಂಡು ಭೀಕರ ದುರಂತಕ್ಕೆ ಕಾರಣವಾಯಿತು. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಬಿಡುಗಡೆ ಮಾಡಿದ ಪ್ರಾಥಮಿಕ ವರದಿಯಲ್ಲಿ, “ವಿಮಾನದ ಮಾರ್ಗದ ಬಳಿ ಯಾವುದೇ ಪಕ್ಷಿಗಳ ಹಾರಾಟ ಕಂಡುಬಂದಿಲ್ಲ” ಎಂದು ಸ್ಪಷ್ಟಪಡಿಸಿದೆ.

ವಿಮಾನ ಅಪಘಾತಕ್ಕೆ ಕಾರಣವಾಗುವುದು ಇಂಧನ ಪೂರೈಕೆ ಸ್ಥಗಿತಗೊಂಡದ್ದೆಂಬುದಾಗಿ ವರದಿ ಮಾಡಲಾಗಿದೆ. ವಿಮಾನ ಹಾರಾಟದ ಆರಂಭದಲ್ಲೇ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆ ಮಾಡುವ ಸ್ವಿಚ್‌ಗಳು 1 ಸೆಕೆಂಡಿನ ಅಂತರದಲ್ಲಿ “ಕಟ್‌ಆಫ್” ಸ್ಥಿತಿಗೆ ಬದಲಾಗಿವೆ. ಇದರಿಂದ ಎಂಜಿನ್‌ಗಳು ನಿಲ್ಲುತ್ತಿದ್ದಂತೆ ವಿಮಾನ ಆಕಾಶದಲ್ಲಿಯೇ ಶಕ್ತಿಹೀನವಾಯಿತು.
ಕಾಕ್ಪಿಟ್ ವಾಯ್ಸ್ ರೆಕಾರ್ಡಿಂಗ್‌ನಲ್ಲಿ ಪೈಲಟ್‌ಗಳಲ್ಲಿ ಒಬ್ಬರು ಇಂಧನ ಕಟ್‌ಆಫ್ ಯಾಕೆ ಮಾಡಿದೆಯೆಂದು ಕೇಳಿದಾಗ, ಇನ್ನೊಬ್ಬರು ತಾವು ಮಾಡಿಲ್ಲವೆಂದು ಪ್ರತಿಕ್ರಿಯಿಸಿದ್ದಾರೆ. ಇದರ ಆಧಾರದಲ್ಲಿ ಉದ್ದೇಶಪೂರ್ವಕ ತೊಂದರೆ ಇಲ್ಲವೆಂಬ ಅನುಮಾನ ತೊರೆದಿದೆ.
DGCA ಲ್ಯಾಬ್‌ನಲ್ಲಿ ಪರೀಕ್ಷಿಸಲಾದ ಇಂಧನ ಮಾದರಿಗಳು ಸಮರ್ಪಕವಾಗಿವೆ ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಇದು ಕೇವಲ ಇಂಧನ ತಾಂತ್ರಿಕ ದೋಷವೇ ಅಥವಾ ಮತ್ತೇನಾದರೂ ಕಾರಣವಿದೆಯೇ? ಮುಂದಿನ ತನಿಖೆಯಿಂದ ನಿರ್ಧಾರವಾಗಲಿದೆ.