ಜುಲೈ 1 ರಿಂದ ರೈಲು ದರ ಹೆಚ್ಚಳ: ಎಸಿ ಹಾಗೂ ಎಸಿ ಅಲ್ಲದ ದರ್ಜೆಗಳಲ್ಲಿ ದರ ಹೆಚ್ಚಳ

ಜುಲೈ 1 ರಿಂದ ರೈಲು ದರ ಹೆಚ್ಚಳ: ಎಸಿ ಹಾಗೂ ಎಸಿ ಅಲ್ಲದ ದರ್ಜೆಗಳಲ್ಲಿ ದರ ಹೆಚ್ಚಳ

ನವದೆಹಲಿ, ಜೂನ್ 24: ಭಾರತೀಯ ರೈಲ್ವೆ ಪ್ರಯಾಣ ದರಗಳು ಜುಲೈ 1 ರಿಂದ ಹೆಚ್ಚಾಗಲಿವೆ. ಎಸಿ ಅಲ್ಲದ ಮತ್ತು ಎಸಿ ದರ್ಜೆಯ ಮೇಲ್/ಎಕ್ಸ್‌ಪ್ರೆಸ್ ರೈಲುಗಳಲ್ಲಿ ದರವನ್ನು ಕ್ರಮವಾಗಿ ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಮತ್ತು 2 ಪೈಸೆಯಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಬದಲಾವಣೆಗಳನ್ನು ಜಾರಿಗೊಳಿಸಲು ರೈಲ್ವೆ ಮಂಡಳಿ ಸಚಿವಾಲಯಕ್ಕೆ ಶಿಫಾರಸು ಸಲ್ಲಿಸಿದ್ದು, ಅಧಿಕೃತ ಅಧಿಸೂಚನೆ ಈ ವಾರದ ಕೊನೆಯಲ್ಲಿ ಹೊರಬರುವ ಸಾಧ್ಯತೆ ಇದೆ.

ಯಾವ ಸೇವೆಗಳಿಗೆ ದರ ಹೆಚ್ಚಳ?

  • ಎಸಿ ಅಲ್ಲದ ಮೇಲ್/ಎಕ್ಸ್‌ಪ್ರೆಸ್ ರೈಲುಗಳು: ಪ್ರತಿ ಕಿಮೀಗೆ 1 ಪೈಸೆ ಹೆಚ್ಚಳ
  • ಎಸಿ ದರ್ಜೆ ರೈಲುಗಳು: ಪ್ರತಿ ಕಿಮೀಗೆ 2 ಪೈಸೆ ಹೆಚ್ಚಳ
  • ಉಪನಗರ ರೈಲುಗಳು ಮತ್ತು 500 ಕಿಮೀ ಒಳಗಿನ ಸೆಕೆಂಡ್ ಕ್ಲಾಸ್ ಪ್ರಯಾಣಗಳಿಗೆ ಯಾವುದೇ ದರ ಹೆಚ್ಚಳ ಇಲ್ಲ.
  • ಮಾಸಿಕ ಸೀಸನ್ ಟಿಕೆಟ್‌ (MST) ದರಗಳು ಯಥಾವತ್ತಾಗಿರುತ್ತವೆ.

ಹೆಚ್ಚಳದ ಹಿನ್ನೆಲೆ ಏನು?
ಕೋವಿಡ್-19 ಸಾಂಕ್ರಾಮಿಕದ ಬಳಿಕ ರೈಲ್ವೆ ಇಲಾಖೆಯ ಹಣಕಾಸು ವ್ಯವಸ್ಥೆಗೆ ಬಿದ್ದ ಭಾರವನ್ನು ಸಮತೋಲನಗೊಳಿಸಲು ಇದು ಮೊದಲ ದರ ಪರಿಷ್ಕರಣೆ ಆಗಿದೆ. ಕೊನೆಯ ಬಾರಿಗೆ ಜನವರಿ 2020 ರಲ್ಲಿ ದರ ಪರಿಷ್ಕರಣೆ ನಡೆದಿತ್ತು, ಆಗ ಎಸಿ ಅಲ್ಲದವರಿಗೆ 2 ಪೈಸೆ, ಎಸಿ ಚೇರ್ ಕಾರ್ ಮತ್ತು ಎಸಿ-3 ಟೈರ್‌ಗೆ 4 ಪೈಸೆಯಷ್ಟು ಹೆಚ್ಚಳ ಜಾರಿಗೆ ಬಂದಿತ್ತು.

ರಾಷ್ಟ್ರೀಯ