ಸಂಪಾಜೆ ಗ್ರಾಮ ಪಂಚಾಯತ್ ಹಾಗೂ ಅರಣ್ಯ ಇಲಾಖೆಯ ನಿರ್ದೇಶನದಂತೆ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ರವರ ಸಮ್ಮುಖದಲ್ಲಿ ಎಸ್ ವೈ ಎಸ್ ಸಾಂತ್ವನ ಇಸಾಬ ತಂಡದ ಕಾರ್ಯಕರ್ತರು ಕಲ್ಲುಗುಂಡಿಯ ಬಾಲೆಂಬಿ ರಸ್ತೆಯಲ್ಲಿರುವ ಸೇತುವೆಯಲ್ಲಿ ಸಿಲುಕಿದ್ದ ಬೃಹದಾಕಾರದ ಮರ, ಬಿದಿರು ಹಾಗೂ ಇತರ ಕಸಕಡ್ಡಿಗಳನ್ನು ರಭಸವಾಗಿ ಹರಿಯುವ ನೀರಿನಲ್ಲಿ ಸಾಹಸಮಯವಾಗಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.


ಮರ, ಮರದ ಕೊಂಬೆಗಳು, ಬಿದಿರು ಹಾಗೂ ಇತರ ಕಸಕಡ್ಡಿಗಳು ತುಂಬಿ ಬ್ಲಾಕ್ ಆಗಿದ್ದ ಸೇತುವೆಯು ಅಪಾಯದ ಅಂಚಿನಲ್ಲಿತ್ತು. ಮಳೆ ಹೆಚ್ಚಾಗಿ ನೀರು ಜಾಸ್ತಿಯಾಗಿ ಬಂದರೆ ಸೇತುವೆ ಮುಚ್ಚಿ ನೀರು ರಸ್ತೆ ಹಾಗೂ ಪರಿಸರ ಪ್ರದೇಶಗಳಿಗೆ ಹರಿದು ನಾಶನಷ್ಟಗಳು ಸಂಭವಿಸುವ ಸಾಧ್ಯತೆ ಇದ್ದುದನ್ನು ಗಮನಿಸಿದ ಪಂಚಾಯತ್ ಹಾಗೂ ಅರಣ್ಯ ಅಧಿಕಾರಿಗಳು ಅದನ್ನು ತೆರವುಗೊಳಿಸಲು ಎಸ್ ವೈ ಎಸ್ ಸಾಂತ್ವನ ಇಸಾಬ ತಂಡದೊಂದಿಗೆ ಅಪೇಕ್ಷಿಸಿದರು.



ಅದರಂತೆ ಸುಮಾರು 3 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಎಸ್ ವೈ ಎಸ್ ಸಾಂತ್ವನ ಇಸಾಬ ತಂಡವು ಎಲ್ಲವನ್ನೂ ತೆರವುಗೊಳಿಸಿ ಸೇತುವೆಯಲ್ಲಿ ನೀರು ಹರಿಯಲು ಸೂಕ್ತವಾಗುವಂತೆ ಮಾಡಿಕೊಡಲಾಯಿತು.
ಕಾರ್ಯಾಚರಣೆಯಲ್ಲಿ ಎಸ್ ವೈ ಎಸ್ ದಕ್ಷಿಣ ಕನ್ನಡ ಜಿಲ್ಲಾ ಸಾಂತ್ವನ ತಂಡದ ಸಿದ್ದೀಖ್ ಗೂನಡ್ಕ, ಸುಳ್ಯ ಸಾಂತ್ವನ ಇಸಾಬ ತಂಡದ ಅಧ್ಯಕ್ಷರಾದ ಎ.ಎಂ.ಫೈಝಲ್ ಝುಹ್‌ರಿ, ಕಾರ್ಯದರ್ಶಿ ಅಬ್ದುಲ್ ರಝಾಕ್ ಅಲೆಕ್ಕಾಡಿ, ಸರ್ಕಲ್ ಸಾಂತ್ವನ ಇಸಾಬ ಕಾರ್ಯದರ್ಶಿ ನಸೀರ್ ಅಡ್ಕಾರು, ಸಾಂತ್ವನ ಇಸಾಬ ತಂಡದ ನುರಿತರಾದ ಸಿ.ಹೆಚ್ ಅಬ್ದುಲ್ ಖಾದರ್ ಸುಣ್ಣಮೂಲೆ, ನೌಫಲ್ ಸಅದಿ ಜಾಲ್ಸೂರು, ತಸ್ರೀಕ್ ಅಲೆಕ್ಕಾಡಿ ರವರು ಕಾರ್ಯಾಚರಣೆ ನಡೆಸಿದರು.
ಪಂಚಾಯತ್ ಉಪಾಧ್ಯಕ್ಷರಾದ ಎಸ್.ಕೆ. ಹನೀಫ, ಪಂಚಾಯತ್ ಸದಸ್ಯರಾದ ಜಿ.ಕೆ ಹಮೀದ್ ಗೂನಡ್ಕ, ಎಸ್ಸೆಸ್ಸಫ್ ಕಲ್ಲುಗುಂಡಿ ಯೂನಿಟ್ ಕೋಶಾಧಿಕಾರಿ ಹಸೈನ್ ಚಟ್ಟೆಕಲ್ಲು ಹಾಗೂ ಇತರರು ಸಹಕರಿಸಿದರು.