ಸುಳ್ಯ: ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ವೆಬ್ ನ್ಯೂಸ್ ಮತ್ತು ಯೂಟ್ಯೂಬ್ ಚಾನಲ್ ಆದ ನ್ಯೂಸ್ ರೂಮ್ ಫಸ್ಟ್ ನ ಹೆಸರನ್ನು ಇತ್ತೀಚೆಗೆ ಪ್ರಾರಂಭವಾದ ಬೇರೊಂದು ಚಾನಲ್ ದುರ್ಬಳಕೆ ಮಾಡುತ್ತಿರುವುದು ಕಂಡು ಬಂದಿದೆ.


ವೆಬ್ಸೈಟ್ ಡೊಮೈನ್ ಹೆಸರು ಕೂಡಾ ಪುತ್ತೂರಿನಲ್ಲಿ ಸುಮಾರು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ನ್ಯೂಸ್ ಚಾನೆಲ್ ನ ಇನ್ನೊಂದು ರೂಪ ಅಂದರೆ .ಇನ್ ಖರೀದಿಸಿ ಪ್ರಾರಂಭಿಸಿದ ಈ ಚಾನೆಲ್ ನ ಲೋಗೋದಲ್ಲಿ ಡೊಮೈನ್ ಹೆಸರಿನಲ್ಲಿ ಇಲ್ಲದ 1 ಅನ್ನು ಸೇರಿಸಿ ನ್ಯೂಸ್ ರೂಮ್ ಫಸ್ಟ್ ಎಂಬಂತೆ ಬಿಂಬಿಸುತ್ತಿದ್ದು ಕಾಪಿ ರೈಟ್ ಆಕ್ಟ್ ಪ್ರಕಾರ ಇದು ಕೂಡ ಕಾನೂನು ಬಾಹಿರವಾಗಿದೆ.

ಇದೇ ಗತಿಕೆಟ್ಟ ಚಾನಲ್ ಇಂದು ತನ್ನ ಯೂಟ್ಯೂಬ್ ವಿಡಿಯೋದಲ್ಲಿ ವಾಟರ್ ಮಾರ್ಕ್ ಆಗಿ ನಮ್ಮ ನ್ಯೂಸ್ ರೂಮ್ ಪಸ್ಟ್ ನ ಹೆಸರನ್ನು ಬಳಸಿದ್ದು ಈ ತಕ್ಷಣ ಅದನ್ನು ಡಿಲೀಟ್ ಮಾಡದೆ ಇದ್ದರೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ನ್ಯೂಸ್ ರೂಮ್ ಫಸ್ಟ್ ಎಚ್ಚರಿಕೆ ನೀಡುತ್ತದೆ. ಹೆಸರಿಗೂ ಬರಗೆಟ್ಟ ಈ ಚಾನೆಲ್ ನ ಮಾಲಕ ಈ ಹಿಂದೆ ನಮ್ಮದೇ ಚಾನೆಲ್ ನಲ್ಲಿ ಕೆಲಸ ಮಾಡಿದ್ದು ಉಂಡ ಮನೆಗೆ ಉಂಡೆ ನಾಮ ಹಾಕಿರುವುದು ಇಲ್ಲಿ ಉಲ್ಲೇಖನೀಯ.