ಬಂಟ್ವಾಳ ತಾಲ್ಲೂಕಿನ ಕೈಕಂಬ ಕ್ರಾಸ್ ಬಳಿ ಇಂದು (ಮೇ 2) ನಡೆದ ಸುಹಾಸ್ ಶೆಟ್ಟಿ ಅವರ ಅಂತಿಮ ಸಂಸ್ಕಾರ ಯಾತ್ರೆ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಶವಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ಒಂದು ಆಟೋ ವಾಹನ ರಸ್ತೆ ಮಧ್ಯದಲ್ಲಿ ನಿಂತಿತ್ತು. ಮೆರವಣಿಗೆಯ ನಿರಂತರ ಚಲನೆಗೆ ಅಡ್ಡಿಯಾದ ಕಾರಣದಿಂದ ಕಾರ್ಯಕರ್ತರು ಆ ಆಟೋವನ್ನು ಸ್ಥಳದಿಂದ ತೆಗೆದು ಹಾಕುವ ಪ್ರಯತ್ನದಲ್ಲಿ ಜಖಂ ಮಾಡಿದರು.




ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಿಂದಾಗಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಉದ್ವೇಗ ವಾತಾವರಣ ಮನೆ ಮಾಡಿದೆ.
ಘಟನೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.ದಕ್ಷಿಣ ಕನ್ನಡ ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಬಿಗಿಯಾದ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ