ನ್ಯೂಜಿಲೆಂಡ್ ತಂಡವು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಪ್ರವೇಶಿಸಿದೆ. ಲಾಹೋರ್‌ನ ಗಡ್ಡಾಫಿ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾದ ವಿರುದ್ಧ 362/6 ರನ್‌ಗಳ ದಾಖಲೆಯನ್ನು ನಿರ್ಮಿಸಿತು . ನ್ಯೂಜಿಲೆಂಡ್ ತಂಡದ ರಚಿನ್ ರವೀಂದ್ರ ಮತ್ತು ಕೇನ್ ವಿಲಿಯಮ್ಸನ್ ಶತಕಗಳನ್ನು ಬಾರಿಸಿ ತಂಡವನ್ನು ಬಲಪಡಿಸಿದರು


ದಕ್ಷಿಣ ಆಫ್ರಿಕಾ 363 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಹರಸಾಹಸಪಟ್ಟರೂ, ಅವರ ಬ್ಯಾಟಿಂಗ್ ವೈಫಲ್ಯದಿಂದ ಗುರಿ ಮುಟ್ಟಲು ವಿಫಲವಾಯಿತು. ಡೇವಿಡ್ ಮಿಲ್ಲರ್ 67 ಎಸೆತದಲ್ಲಿ ಶತಕ ಗಳಿಸಿ ಏಕಾಂಗಿಯಾಗಿ ತಂಡವನ್ನು ಮುನ್ನಡೆಸುವ ಪ್ರಯತ್ನ ಮಾಡಿದರೂ, ಆಫ್ರಿಕಾ ತಂಡವು 50 ಓವರಿನಲ್ಲಿ 312 ರನ್ ಗಳಿಸಿ ಸೋಲನಪ್ಪಿತು. ಈ ಮೂಲಕ ನ್ಯೂಜಿಲೆಂಡ್ 50 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ, ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್‌ಗೆ ಪ್ರವೇಶಿಸಿತು.ಈ ಗೆಲುವಿನಿಂದಾಗಿ ನ್ಯೂಜಿಲೆಂಡ್ ತಂಡವು ಇದೀಗ ಭಾರತವನ್ನು ಎದುರಿಸಲು ಸಜ್ಜಾಗಿದೆ. ಫೈನಲ್ ಪಂದ್ಯವು ಮಾರ್ಚ್ 9, 2025ರಂದು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.