ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ತನ್ನ ಜನಪ್ರಿಯ ಎಸ್ಯುವಿ ಸ್ಕಾರ್ಪಿಯೊ-ಎನ್ನ 2 ಲಕ್ಷ ಯುನಿಟ್ಗಳ ಮಾರಾಟದ ಸಂಭ್ರಮದಲ್ಲಿ ಸ್ಕಾರ್ಪಿಯೊ-ಎನ್ ಕಾರ್ಬನ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ₹19,19,400 ರಿಂದ ₹24,89,100 (ಎಕ್ಸ್-ಶೋ ರೂಮ್) ಮಧ್ಯೆ ಬೆಲೆ ಹೊಂದಿರುವ ಈ ವಿಶೇಷ ಆವೃತ್ತಿಯಲ್ಲಿ ಪ್ರೀಮಿಯಂ ಲೆದರೇಟ್ ಇಂಟೀರಿಯರ್ಸ್ ಮತ್ತು ಮೆಟಾಲಿಕ್ ಬ್ಲ್ಯಾಕ್ ಎಕ್ಸ್ಟೀರಿಯರ್ ಅನ್ನು ಒಳಗೊಂಡಿದ್ದು, ಎಸ್ಯುವಿಯ ಸೊಗಸಾದ ಮತ್ತು ಬಲಿಷ್ಠ ವಿನ್ಯಾಸವನ್ನು ಹೊಂದಿದೆ.


ಮುಖ್ಯ ವೈಶಿಷ್ಟ್ಯಗಳು:
- Z8 ಮತ್ತು Z8L ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.
- ಮೆಟಾಲಿಕ್ ಬ್ಲ್ಯಾಕ್ ಥೀಮ್, ಕಪ್ಪು ಅಲಾಯ್ ಚಕ್ರಗಳು ಮತ್ತು ಸ್ಮೋಕ್ ಕ್ರೋಮ್ ಅಲಂಕಾರಗಳು.
- ಪ್ರೀಮಿಯಂ ಲೆದರೇಟ್ ಸೀಟುಗಳು ಮತ್ತು ಕಾಂಟ್ರಾಸ್ಟ್ ಡೆಕೊ-ಸ್ಟಿಚಿಂಗ್.
- 5-ಸ್ಟಾರ್ ಗ್ಲೋಬಲ್ NCAP ರೇಟಿಂಗ್ ಮತ್ತು ಅಧುನಿಕ ಸುರಕ್ಷತಾ ವೈಶಿಷ್ಟ್ಯಗಳು.





#BigDaddyOfSUVs ಪರಂಪರೆಯನ್ನು ಮುಂದುವರಿಸುತ್ತಿರುವ ಸ್ಕಾರ್ಪಿಯೊ-ಎನ್ ಕಾರ್ಬನ್ ಎಡಿಷನ್, ಮಹೀಂದ್ರಾ ಎಸ್ಯುವಿಗಳ ಅಸಲಿ ಶೈಲಿಯನ್ನು ಮೆರೆಯುತ್ತಿದ್ದು, ಆಕರ್ಷಕ ವಿನ್ಯಾಸ ಮತ್ತು ಸುಸಜ್ಜಿತ ಸೌಲಭ್ಯಗಳನ್ನು ಒದಗಿಸುತ್ತದೆ.
ಈ ವಿಶೇಷ ಆವೃತ್ತಿಯು ಸ್ಕಾರ್ಪಿಯೊ-ಎನ್ ಎಸ್ಯುವಿಯ ಥ್ರಿಲ್ಲಿಂಗ್ ರೈಡ್ ಮತ್ತು ಪರಿಪೂರ್ಣ ಹ್ಯಾಂಡ್ಲಿಂಗ್ ಅನ್ನು ಕಾಪಾಡಿಕೊಂಡು, ಅದ್ಧೂರಿ ವಿನ್ಯಾಸದೊಂದಿಗೆ ಬಲಿಷ್ಠತೆಯನ್ನು ಸಮತೋಲನಗೊಳಿಸಿದೆ.