ಪಡುಬಿದ್ರಿ: ಚಾಲಕನಿಗೆ ಹಠಾತ್ ಎದೆನೋವು, ರಸ್ತೆ ಪಕ್ಕದ ಜಮೀನಿಗಿಳಿದು ನಿಂತ ಬಸ್

ಪಡುಬಿದ್ರಿ: ಚಾಲಕನಿಗೆ ಹಠಾತ್ ಎದೆನೋವು, ರಸ್ತೆ ಪಕ್ಕದ ಜಮೀನಿಗಿಳಿದು ನಿಂತ ಬಸ್

ಪಡುಬಿದ್ರಿ: ಚಾಲಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡ ಪರಿಣಾಮ ಚಲಿಸುತ್ತಿದ್ದ ಬಸ್ ಹೆದ್ದಾರಿ ಪಕ್ಕದ ಇಳಿಜಾರಿಗಿಳಿದು ನಿಂತ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.

ತೆಂಕ ಎರ್ಮಾಳಿನ ಮಸೀದಿ ಬಳಿ ಉಡುಪಿಯತ್ತ ಹೋಗುತ್ತಿದ್ದ ತಡೆರಹಿತ ಬಸ್ ನ ಚಾಲಕ ಶಂಭು ಎಂಬವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಆ ಕೂಡಲೇ ಬಸ್ ಚಾಲಕ ಹಾಗೂ ಗಾಯಗೊಂಡಿದ್ದ ಪ್ರಯಾಣಿಕರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ರಾಜ್ಯ