ಆಕಾಶ ನೀನೆ ನೀಡೊಂದು ಗೂಡು ಎಂದು ಹಾಡಿ, ಜನರ ಮನಗೆದ್ದ ಹೂ ಮಾರುವ ಹುಡುಗ ದ್ಯಾಮೇಶ

ಆಕಾಶ ನೀನೆ ನೀಡೊಂದು ಗೂಡು ಎಂದು ಹಾಡಿ, ಜನರ ಮನಗೆದ್ದ ಹೂ ಮಾರುವ ಹುಡುಗ ದ್ಯಾಮೇಶ

ದ್ಯಾಮೇಶ ಉತ್ತರ ಕರ್ನಾಟಕ ಜಿಲ್ಲೆಯ ಕಾರಟಗಿ ಊರಿನ ಹೂ ಮಾರುವ ಹುಡುಗ. ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ದ್ಯಾಮೇಶ, ತನ್ನ ಅಜ್ಜಿಯ ಜೊತೆ ಪುಟ್ಟ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ. ದೇವರಿಗೆ ಸಿರಿತನ – ಬಡತನ ಎಂಬ ಬೇಧವಿಲ್ಲ. ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ದ್ಯಾಮೇಶನಿಗೆ ವರವಾಗಿ ಬಂದದ್ದು ಆತನ ಕಂಠಸಿರಿ.

ತಾಯಿಯಿಲ್ಲದ ಅವನನ್ನು ಗಾಯಕಿ ವಾಣಿಯವರು ಮಗನಂತೆ ಮಾರ್ಗದರ್ಶನ ಕೊಡುತ್ತಾ ಬಂದಿದ್ದಾರೆ. ಇಂದಿನ ಎಪಿಸೋಡ್‌ನಲ್ಲಿ ಆಕಾಶ ನೀನೆ ನೀಡೊಂದು ಗೂಡು ಎಂದು ಹಾಡಿ, ಎಲ್ಲರ ಮೆಚ್ಚುಗೆ ಗಳಿಸಿದ್ದರ ಜೊತೆಗೆ, ಕಂಪೋಸರ್ ಹರಿಕೃಷ್ಣ ಅವರ ಪ್ರಶಂಸೆಗೂ ಭಾಜನರಾದರು. ಮಾನಸ-ಮಾತೆಯಂತೆ ಪೋಷಿಸುತ್ತಿರುವ ವಾಣಿಯವರು ಮತ್ತು ಹರಿಕೃಷ್ಣ ಅವರು ಸ ರಿ ಗ ಮ ಪ ವೇದಿಕೆಯಲ್ಲಿ ಜೊತೆಯಿದ್ದ ಅದ್ಭುತ ಸಂದರ್ಭದಲ್ಲಿ ದ್ಯಾಮೇಶ ಅವರು ಶಿವ – ಪಾರ್ವತಿ – ಗಣಪತಿ ಜೊತೆಯಾಗಿರುವ ಮೂರ್ತಿಯೊಂದನ್ನು ಕೊಟ್ಟು ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. ಆ ಪುಟ್ಟ ವಿಗ್ರಹವು ವ್ಯಕ್ತಪಡಿಸುತ್ತಿದ್ದ ಭಾವನೆಗಳು ಅಪಾರ.

ಥ್ರಿಲ್ಲಿಂಗ್ ಪರ್ಫಾರ್ಮೆನ್ಸ್ ಅನ್ನು ಕೂಡಾ ಗಳಿಸಿಕೊಂಡರು. ಸರಿಗಮಪ ಗೆ ಬಂದ ನಂತರ ಮೆಂಟರ್ ಲಕ್ಷ್ಮಿ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಅತ್ಯಂತ ಶ್ರದ್ಧೆಯಿಂದ ಗಾಯನವನ್ನು ಕಲಿಯುತ್ತಿರುವ ಈತನಿಗೆ ವಾಣಿಯವರ ಪ್ರೋತ್ಸಾಹವೂ ಜೊತೆಯಾಗಿದೆ. ದ್ಯಾಮೇಶನ ಸರಿಗಮಪ ಪಯಣವು ಆತನ ಜೀವನದಲ್ಲಿ ಹೊಸ ಬೆಳಕನ್ನು ಮೂಡಿಸಿರುವುದಂತೂ ಖಚಿತ.

ಮನೋರಂಜನೆ