
ದೆಹಲಿ: ದೆಹಲಿ ವಿಧಾನಸಭೆ ಚುಣಾವಣೆ 2025 ರಲ್ಲಿ ಬಿಜೆಪಿಯು ಅತ್ಯಂತ ಹೆಚ್ಚು ಮತಗಳನ್ನು ಗಳಿಸಿ, ಗೆಲುವು ಸಾಧಿಸುತ್ತಿರುವುದು ಖಚಿತವಾದ ಬೆನ್ನಲ್ಲೇ, ಪ್ರಧಾನಮಂತ್ರಿ ಮೋದಿ, ದೆಹಲಿಗೆ ಬರಲಿದ್ದಾರೆ. ದೆಹಲಿಯ ಬಿಜೆಪಿ ಕಛೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ತಾವೂ ಈ ಬೃಹತ್ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಿದ್ದಾರೆ.


ಕಳೆದ 27 ವರ್ಷಗಳಿಂದಲೂ ಸೋಲನ್ನೇ ಕಾಣುತ್ತಿದ್ದ ಬಿಜೆಪಿಗೆ, ಇದು ಒಂದು ಅತ್ಯುನ್ನತ ಗೆಲುವಾಗಿರುತ್ತದೆ. ಈ ಗೆಲುವಿನ ಮೂಲಕ ಬಿಜೆಪಿ, ಕಾಂಗ್ರೆಸ್ ಅನ್ನು ಖಾತೆ-ರಹಿತ ಪಕ್ಷವನ್ನಾಗಿ ಮಾಡಲಿದೆ. ಜೊತೆಗೆ ಆಪ್ ಪಕ್ಷದ ಸತತ ಮೂರು ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸನ್ನು ನುಚ್ಚುನೂರು ಮಾಡಲಿದೆ.