ದೆಹಲಿ ವಿಧಾನಸಭಾ ಚುನಾವಣೆ 2025: ಭಾರಿ ಮುನ್ನಡೆ ಸಾಧಿಸುತ್ತಿರುವ ಬಿಜೆಪಿ; ಆಪ್ ಪಕ್ಷಕ್ಕೆ ಅಚ್ಚರಿ ಹಿನ್ನಡೆ

ದೆಹಲಿ ವಿಧಾನಸಭಾ ಚುನಾವಣೆ 2025: ಭಾರಿ ಮುನ್ನಡೆ ಸಾಧಿಸುತ್ತಿರುವ ಬಿಜೆಪಿ; ಆಪ್ ಪಕ್ಷಕ್ಕೆ ಅಚ್ಚರಿ ಹಿನ್ನಡೆ

ನವದೆಹಲಿ: ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಿದ್ದು, 2025 ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾರೀ ಮುನ್ನಡೆ ಸಾಧಿಸುತ್ತಿದೆ. ಆಮ್ ಆದ್ಮಿ ಪಕ್ಷ (ಆಪ್) ಕಳೆದ 10 ವರ್ಷಗಳಿಂದ ಆಳ್ವಿಕೆಯಲ್ಲಿದ್ದರೂ, ಈಗ ಗಣನೀಯ ಮತಗಳಿಂದ ಹಿನ್ನಡೆಯನ್ನು ಅನುಭವಿಸುತ್ತಿದೆ. ಈ ಬಾರಿ ಬಿಜೆಪಿ ಜಯಗಳಿಸಿದರೆ, ಅದು 30 ವರ್ಷಗಳ ಸುದೀರ್ಘ ಅಂತರಗಳ ನಂತರ ಅಧಿಕಾರವನ್ನು ಪಡೆದುಕೊಳ್ಳಲಿದೆ.

ಚುಣಾವಣಾ ಆಯೋಗದ ಪ್ರಕಾರ ಪಕ್ಷಗಳು ಮುನ್ನಡೆ ಸಾಧಿಸುತ್ತಿರುವ ಕ್ಷೇತ್ರಗಳ ಚಿತ್ರಣ

ಪ್ರಸ್ತುತ ಚುಣಾವಣಾ ಫಲಿತಾಂಶದ ಅವಲೋಕನ

ಬಿಜೆಪಿ 70 ಸ್ಥಾನಗಳಲ್ಲಿ 41  ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.  ಆಪ್ 29 ಸ್ಥಾನಗಳಿಗೆ ಸೀಮಿತಗೊಂಡರೆ, ಕಾಂಗ್ರೆಸ್ ಇನ್ನೂ ತನ್ನ ಖಾತೆಯನ್ನೇ ತೆರೆದಿಲ್ಲ. ಬಾರಿ ಶೇ. 60.5% ತಮ್ಮ ಚಿತ್ತವನ್ನು ಬದಲಾಯಿಸಿದ್ದು, ಗೆಲ್ಲುವ ಪಕ್ಷಕ್ಕೆ ಈ ಮತಗಳು ಶಕ್ತಿಯಾಗಿ ಪರಿಣಮಿಸುತ್ತಿವೆ. ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸುತ್ತಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯ ಜನಪ್ರಿಯತೆ ಬಿಜೆಪಿಯ ಈ ಮಹತ್ತರ ಮುನ್ನಡೆಗೆ ಕಾರಣವಾಗಿದೆ. ನಗರದಲ್ಲಿ ನಿಗಾ ವಹಿಸಬೇಕಾದ ತ್ಯಾಜ್ಯ ನಿರ್ವಹಣೆ, ನೀರಿನ ಸರಬರಾಜು ಮುಂತಾದ ಸಮಸ್ಯೆಗಳ ನಿರ್ವಹಣೆದಲ್ಲಿ ಆಪ್ ವಿಫಲಗೊಂಡಿರುವುದು ಕೂಡಾ ಬಿಜೆಪಿಗೆ ಲಾಭದಾಯಕವಾಗಿದೆ. 2020 ರ ಚುಣಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ, ಈ ಬಾರಿ 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. 20 ಹಾಲಿ ಶಾಸಕರಿಗೆ ಆಪ್ ಟಿಕೆಟ್ ನೀಡದಿದ್ದ ಕಾರಣ, ಅವರಲ್ಲಿ 8 ಮಂದಿ ಬಿಜೆಪಿ ಪಕ್ಷವನ್ನು ಸೇರಿದ್ದರು.

5ನೇ ಸುತ್ತಿನವರೆಗೂ ಮುನ್ನಡೆ ಸಾಧಿಸಿಕೊಂಡು ಬಂದಿದ್ದ ಅರವಿಂದ ಕೇಜ್ರಿವಾಲ್ 6ನೇ ಸುತ್ತಿನಲ್ಲಿ ಪರ್ವೇಶ್ ವರ್ಮಾ ಎದುರು 225 ಮತಗಳಿಂದ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಕಲ್ಕಾಜಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಅತೀಶಿಯವರಿಗೆ 2800 ಮತಗಳ ಹಿನ್ನಡೆ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಕೂಡಾ ಹಿನ್ನಡೆಯಲ್ಲಿದ್ದಾರೆ.

6ನೇ ಸುತ್ತಿನಲ್ಲಿಯೂ ಕೇಜ್ರಿವಾಲ್ ಹಿನ್ನಡೆಯನ್ನೇ ಅನುಭವಿಸುತ್ತಿದ್ದಾರೆ. ಅತೀಶಿ ವಿರುದ್ಧ ರಮೇಶ್ ಬಿದುರೈ ಭಾರೀ ಮತಗಳ ಮುನ್ನಡೆ ಸಾಧಿಸುತ್ತಿದ್ದಾರೆ.

ಈಗಾಗಲೇ ಬೇಶದೆಲ್ಲೆಡೆ ಬಿಜೆಪಿ ಕಛೇರಿಗಳಲ್ಲಿ ಸಂಭ್ರಮಾಚರಣೆ ಪ್ರಾರಂಭವಾಗಿದೆ. ರಾಜ್ಯ ಹಾಗೂ ರಾಷ್ಟ್ರೀಯ ಪಕ್ಷದ ವರಿಷ್ಠರು ಬಿಜೆಪಿ ಪಕ್ಷಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಅಮಿತ್ ಶಾ ಮತ್ತು ಪ್ರಧಾನಮಂತ್ರಿ ಮೋದಿಯವರ ರಾಜತಾಂತ್ರಿಕತೆಯನ್ನು ಕೊಂಡಾಡುತ್ತಿದ್ದಾರೆ.

ರಾಷ್ಟ್ರೀಯ