ಸುಳ್ಯ ತಾಲೂಕಿನ ಕುಕ್ಕಂದೂರು ಪರಿಸರದಲ್ಲಿ ನಿನ್ನೆ ರಾತ್ರಿ ಗೋಪಿನಾಥ್ ಎಂಬವರ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು 2 ತೆಂಗಿನಮರ, 3 ಅಡಿಕೆ ಗಿಡ ಹಾಗೂ ಬಾಳೆ ಇತ್ಯಾದಿ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ. ಸುಳ್ಯ ಪರಿಸರದಲ್ಲಿ ಆನೆ ಹಾವಳಿ ಹೆಚ್ಚಾಗುತ್ತಿದ್ದು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.




