ಸುಳ್ಯ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಮಿತಿ ರದ್ದು ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಕ್ಕಿಲ್ಲ: ಸಮಿತಿ ರದ್ದಾಗಿದೆ ಎಂಬುದು ಅಪವಾದ

ಸುಳ್ಯ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಮಿತಿ ರದ್ದು ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಕ್ಕಿಲ್ಲ: ಸಮಿತಿ ರದ್ದಾಗಿದೆ ಎಂಬುದು ಅಪವಾದ

ಸುಳ್ಯ:ಗಾಂಧಿನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಮಿತಿ ರದ್ದಾಗಿದೆ ಎನ್ನುವ ಅಪವಾದ ಹೊರಿಸಲಾಗಿದೆ . ‌ಶಾಸಕ‌ ಎಸ್. ‌ಅಂಗಾರ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ಅವಧಿ ಮುಗಿಯಲು ಇನ್ನೂ ಮೂರು ತಿಂಗಳು ಕಾಲಾವಕಾಶವಿದೆ ಎಂದು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಎಸ್‌ಡಿಎಂಸಿ ಉಪಾಧ್ಯಕ್ಷ ಹಾಗು ಕಾರ್ಯಾಧ್ಯಕ್ಷ ಪ್ರವೀಣ್‌ ನಾಯಕ್ ಪ್ರೆಸ್ ಕ್ಲಬ್ ನಲ್ಲಿ ಶಿಕ್ಷಣ ಸಂಸ್ಥೆಯವರ ನಡೆಯನ್ನು ಖಂಡಿಸಿ ಸಮಿತಿಯನ್ನು ಸಮರ್ತಿಸಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಥಮಿಕ ಹಾಗು ಪ್ರೌಢ ಶಾಲೆಗಳ ಮೇಲುಸ್ತುವಾರಿ ಸಮಿತಿ ರದ್ದಾಗಿದೆ ಅದರ ಪ್ರತಿ ನನ್ನಲ್ಲೂ ಇದೆ, ಪ್ರಾಥಮಿಕ, ಪ್ರೌಢ ಶಾಲೆ ಹಾಗು ಪದವಿಪೂರ್ವ ವಿಭಾಗ ಸೇರಿ ಇಡೀ ಶಾಲೆಗೆ ಶಾಸಕರ ಅಧ್ಯಕ್ಷತೆಯಲ್ಲಿರುವ ಸಮಿತಿ ರದ್ದು ಮಾಡಲು ಸಚಿವರಿಗೆ ಮಾತ್ರ ಸಾದ್ಯ . ಇದೀಗ ಸಮಿತಿ ರದ್ದಾಗಿದೆ ಎಂದು ಪ್ರಚಾರ ಮಾಡಲಾಗುತಿದೆ. ಇದೀಗ ಶಾಲೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ, ಸಭೆಗಳ ಬಗ್ಗೆ ಸಮಿತಿ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಶಿಕ್ಷಕ ವೃಂದ ಸಭೆ ನಡೆಸುತ್ತಿದೆ. ಮತ್ತು ಒಂದು ವರ್ಷದಿಂದ ಎಸ್‌ಡಿಎಂಸಿ ಸಭೆ ಕರೆಯಲಿಲ್ಲ. ಹೊಸತಾಗಿ ಎಸ್‌ಡಿಎಂಸಿ ಸಮಿತಿ ರಚಿಸುವುದಿದ್ದರೆ,ಅದನ್ನಾದರು ಮಾಡಲಿ, ಕೂಡಲೇ ಸಮಿತಿ ರಚನೆಯಾಗಲಿ, ಅಥವಾ ಇರುವ ಸಮಿತಿಯ ಸಭೆ‌ ನಡೆಸಿ ಪಬ್ಲಿಕ್ ಸ್ಕೂಲ್‌ನ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಸಬೇಕು. ಶಾಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯೋಚನೆ‌ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಗಾಂಧಿನಗರ ಶಾಲೆಯ ಭೂಮಿಯ ಪ್ಲೋಟಿಂಗ್ ಮಾಡಬೇಕಾಗಿದೆ ಎಂದು ಅವರು ಆಗ್ರಹಿಸಿದರು.ಅಲ್ಲದೆ ಈ ಜಾಗ ಸಮಸ್ಯೆಯಿಂದಾಗಿ ಸರ್ವಜನಿಕ ಸಂಪರ್ಕದ ರಸ್ತೆ ಕಡಿತ ವುಂಟಾಗಿದೆ ಈ ಬಗ್ಗೆ ಬೇಸರವಿದೆ ಎಂದು ಹೇಳಿದರು.

ರಾಜ್ಯ