
ಸುಳ್ಯ:ಕೊಲ್ಲಮೊಗ್ರದಲ್ಲಿ ಪೋಷಕರಿಲ್ಲದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಕೆಪಿಸಿಸಿ ಸದಸ್ಯ ಕಡಬ ಬ್ಲಾಕ್ ಕಾಂಗ್ರೇಸ್ ಉಸ್ತುವಾರಿ ಹೆಚ್ ಎಂ ನಂದಕುಮಾರ್ ಅವರು ವಿದ್ಯಾರ್ಥಿಗಳಿಗೆ ತಲಾ 5000 ದಂತೆ ಧನಸಹಾಯ ಮಾಡಿರುವುದಾಗಿ ತಿಳಿದು ಬಂದಿದೆ, ವಂದನ, ತನುಜ, ಅವರಿಗೆ ಪೋಷಕರಿಲ್ಲದೆ ಉಳಿದು ಕೊಳ್ಳಲು ಸ್ವಂತ ಮನೆಗಳಿಲ್ಲದೆ ನರ್ಸಿಂಗ್ ವಿದ್ಯಾಭಾಸಕ್ಕಾಗಿ ಖರ್ಚು ಬರಿಸಲಾಗದೆ ಕಷ್ಟಪಡುತ್ತಿದ್ದು, ಇದನ್ನು ಗಮನಿಸಿದ ಕೊಲ್ಲಮೊಗ್ರ ಕಾಂಗ್ರೇಸ್ ಗ್ರಾಮ ಸಮಿತಿ ನಂದಕುಮಾರ್ ಗಮನಕ್ಕೆ ತಂದಿದ್ದರು, ಇದನ್ನು ಮನಗೊಂಡು ನಂದಕುಮಾರ್ ವಿದ್ಯಾರ್ಥಿನಿಯರಿಗೆ ಸಹಾಯ ಮಾಡಿದಲ್ಲದೆ, ಪ್ರತೀ ತಿಂಗಳು ವಿದ್ಯಾರ್ಥಿನಿಯರ ಶಿಕ್ಷಣ ಮುಗಿಯುವ ವರೆಗೆ ತಿಂಗಳಿಗೆ ತಲಾ 500. ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.


