ಪರಿಸರವಾದಿ ಹಾಗೂ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣದಿಂದ 86ನೇ ವಯಸ್ಸಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಳ್ಳಿ ಗ್ರಾಮದಲ್ಲಿ ಇಂದು (ಡಿಸೆಂಬರ್ 16, 2024) ನಿಧನರಾಗಿದ್ದಾರೆ.

ತುಳಸಿ ಗೌಡರ ಜೀವನಚರಿತ್ರೆ:ಹಾಲಕ್ಕಿ ಗಾಂಭಾರ ಸಮುದಾಯದ ಸದಸ್ಯೆ: ಆಕೆಯ ಸುಸ್ಥಿರ ಪರಿಸರದ ಕಾರ್ಯಗಳಿಂದ ‘ಕಾಡಿನ ಎನ್ಸೈಕ್ಲೋಪೀಡಿಯಾ’ ಎಂಬ ಹೆಸರು ಪಡೆದಿದ್ದರು.
ಸಾಮಾಜಿಕ ಸೇವೆ: 60 ವರ್ಷಗಳ ಕಾಲ, 30,000ಕ್ಕೂ ಹೆಚ್ಚು ಸಸಿ ನೆಟ್ಟು, ಕಾಡು ಸಂರಕ್ಷಣೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.
ಪುರಸ್ಕಾರಗಳು: 2021ರಲ್ಲಿ ಪದ್ಮಶ್ರೀ ಪುರಸ್ಕಾರ, 1986ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಗೌರವಗಳು.
ಪರಿಸರ ಜಾಗೃತಿ: ಕೌಟುಂಬಿಕ ಸಮಸ್ಯೆಗಳ ನಡುವೆಯೂ, ತಮ್ಮ ಬದುಕನ್ನು ಪರಿಸರ ಉಳಿಸುವುದಕ್ಕೆ ಮೀಸಲು ಮಾಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

