
ದಕ್ಷಿಣ ಕನ್ನಡ ಜಿಲ್ಲೆ: ಅಡಿಕೆ ಮತ್ತು ತೆಂಗು ಕೃಷಿಯೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯುವ ಕೊಕ್ಕೊ ಬೆಳೆಯ ಧಾರಣೆಯು ಮತ್ತೆ ಏರಿಕೆಯಾಗುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ದರವು ಪ್ರತಿ ಕೆ.ಜಿಗೆ 150 ಗಡಿ ದಾಟಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಬೇಡಿಕೆ ಹೆಚ್ಚಾಗಿರುವು ದರಿಂದ ಧಾರಣೆಯಲ್ಲಿ ಇನ್ನೂ ಹೆಚ್ಚಿನ ಏರಿಕೆ ಕಾಣುವ ಸಾಧ್ಯತೆ ಇದೆ. ಕೊಕ್ಕೋ ಧಾರಣೆ ಭಾರೀ ಏರಿಕೆಯಾಗಿ, ತೀರಾ ಕುಸಿತಕ್ಕೊಳಗಾಗಿದ್ದ ಸಂದರ್ಭದಲ್ಲಿ ಕೊಕ್ಕೋ ಕೃಷಿಯ ಬಗ್ಗೆ ಕರಾವಳಿ ಭಾಗದ ಕೃಷಿಕರು ಮತ್ತೆ ವಿಶ್ವಾಸ ಕಳೆದು ಕೊಂಡಿದ್ದರು. ಅಡಿಕೆ ಧಾರಣೆಯಲ್ಲಿ ಬಹಳಷ್ಟು ಚೇತರಿಕೆ ಕಂಡು ಬಂದ ಬಳಿಕವಂತೂ ಅಡಿಕೆ ತೋಟಗಳಲ್ಲಿ ಉಪ ಕೃಷಿಯಾಗಿ ಮಾಡಲಾಗುತ್ತಿದ್ದ ಕೊಕ್ಕೋ ಮಿಶ್ರ ಬೆಳೆಗೆ ಮಹತ್ವ ನೀಡಿ ಕೊಕ್ಕೋ ಕೃಷಿಗೆ ಮುಂದಾಗಿದ್ದರು, ಕರಾವಳಿ ಭಾಗದ ಹೆಚ್ಚಿನ ಕೃಷಿಕರು ಅಡಿಕೆ ತೋಟಗಳ ನಡುವೆ ಇದ್ದ ಕೊಕ್ಕೋ ಮರಗಳಿಗೆ ಮಹತ್ವ ನೀಡಲು ಆರಂಭಿಸಿದ್ದರು. ಇದೀಗ ಇಲ್ಲಿನ ಕೃಷಿಕರಿಗೆ ಕೊಕ್ಕೋ ಧಾರಣೆ ಟಾನಿಕ್ ಆಗಿ ಉಲ್ಲಾಸ ಮೂಡಿಸಿದೆ
