ಸುಳ್ಯ ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಅದಾಲತ್ ಜನ ಸಂಪರ್ಕ ಸಭೆ

ಸುಳ್ಯ ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಅದಾಲತ್ ಜನ ಸಂಪರ್ಕ ಸಭೆ


ಸುಳ್ಯ ಶಾಂತಿನಗರ ಭಾಗದಲ್ಲಿ ನಗರ ಪಿಡರ್ ಬದಲಾಯಿಸಿ ಗ್ರಾಮೀಣ ಪಿಡೆರ್ ಮಾಡಿರುವುದರಿಂದ ವಿದ್ಯುತ್ ಸಮಸ್ಯೆ, ಕುಡಿಯುವ ನೀರಿಗೂ ಸಮಸ್ಯೆ ಆಗುತ್ತಿರುವ ಬಗ್ಗೆ ಮಾಜಿ ನಗರ ಪಂಚಯತ್ ಸದಸ್ಯ ನಝೀರ್ ಶಾಂತಿನಗರ, ಗೌತಮ್ ಸೇರ್ಕಜೆ ಹಾಗೂ ಸ್ಥಳೀಯರು ನಮಗೆ ನಗರ ಪಿಡರ್ ಸರಿ ಪಡಿಸುವಂತೆ ಆಗ್ರಹಿಸಿದರು ಮಂಡೆಕೋಲು ಪವರ್ ಮೆನ್ ಸಮಸ್ಯೆ ಬಗ್ಗೆ ಸುರೇಶ್ ಕನೆಮಾರಡ್ಕ ಹಾಗೂ ತಂಡದವರು ಮನವಿ ನೀಡಿದರು. ರಾದಕೃಷ್ಣ ಪರಿವಾರಕನಾ ಟ್ರಿ ಕಟ್ಟಿಂಗ್ ಹಾಗೂ ಇತರ ಸಮಸ್ಯೆ ಬಗ್ಗೆ ವಿವರಿಸಿ ಸರಿ ಪಡಿಸುವಂತೆ ಆಗ್ರಹಿಸಿದರು
ಸಂಪಾಜೆ ವಿದ್ಯುತ್ ಸಮಸ್ಯೆ ಬಗ್ಗೆ ಮೆಸ್ಕಾಂ ಜನ ಸಂಪರ್ಕ ಸಾಬೆಯಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಹಾಗೂ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ.ಹನೀಫ್ ಹಲವು ವಿಚಾರಗಳ ಕುರಿತು ಚರ್ಚಿಸಿದರು ಸಂಪಾಜೆ ಕೇಬಲ್ ಫಿಡರ್ ಪದೇ ಪದೇ ವಿದ್ಯುತ್ ಇಲ್ಲದೆ ಈ ಭಾಗದ ಜನರಿಗೆ ಸಮಸ್ಯೆಯಾಗುತ್ತಿದ್ದು ಕೂಡಲೇ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು. ಆರಂಬೂರು ಬಳಿ ಪದೇ ಪದೇ ಕೇಬಲ್ ಸಮಸ್ಯೆ ಆಗುತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು ಗೂನಡ್ಕ ಶಾರದಾ ಶಾಲಾ ಬಳಿ ಎಚ್. ಟಿ. ಲೈನ್ಗೆ ಕೇಬಲ್ ಅಳವಡಿಸುವುದು
ಸಂಪಾಜೆ ಪಾಂಬಾರ್ ಹಮೀದ್ ಮನೆ ಬಳಿ. Joc ಅಳವಡಿಕೆ, ಗಡಿಕಲ್ಲು ಬಳಿ ಇರುವ joc ದುರಸ್ತಿ. ಗಡಿಕಲ್ಲು ವಿದ್ಯುತ್ ಪರಿವರ್ತಕದ ಎಲ್. ಟಿ ವಯರ್ ಬದಲಾವಣೆ
ಕಡೇಪಲ ವಿದ್ಯುತ್ ಪರಿವರ್ತಕ ದುರಸ್ತಿ
ನಿಗದಿತ ಸಮಯಕ್ಕೆ ಮೀಟರ್ ರೀಡಿಂಗ್ ಬಾರದೆ ಗ್ಯಾರಂಟಿ ಯೋಜನೆ ಅನುದಾನ ಸಿಗುತ್ತಿಲ್ಲ.ಸಂಪಾಜೆ ಗ್ರಾಮಕ್ಕೆ ಸಂಬಂಧಪಟ್ಟ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು ಕಾರ್ಯಕ್ರಮದಲ್ಲಿ ಮೆಸ್ಕಾಂ ಆದಿಕ್ಷಕ ಇಂಜನಿಯರ್ ಕೃಷ್ಣರಾಜ್, ಸುಳ್ಯ ವಿಭಾಗದ ಇಂಜನಿಯರ್ ಹರೀಶ್. ಇಲಾಖೆಯ ವಿವಿಧ ಅಧಿಕಾರಿಗಳು ಜನಪ್ರತಿನಿಧಿಗಳು ಉಪಸ್ಥಿತರಿದ್ದರು ಹಲವು ಗ್ರಾಹಕರು ವೈಯಕ್ತಿಕ ಹಾಗೂ ವಿದ್ಯುತ್ ಪರಿವರ್ತಕ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು

ರಾಜ್ಯ