ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ಪುತ್ತೂರಿನಲ್ಲಿ ನಿಧನ

ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ಪುತ್ತೂರಿನಲ್ಲಿ ನಿಧನ

 

ಪುತ್ತೂರು : ಶಿಕ್ಷಕ, ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ಪೂಜಾರಿ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಮಾಣಿಯವರಾಗಿದ್ದು, ಬೊಳುವಾರಿನಲ್ಲಿ ವಾಸವಾಗಿದ್ದರು.

ಕೆಲ ವರ್ಷಗಳಿದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಗುಣ ಮುಖರಾಗಿದ್ದು, ಆರೋಗ್ಯವಾಗಿದ್ದರು.

ಸುಳ್ಯ ಗಾಂಧಿನಗರ ಶಾಲೆಯಲ್ಲಿ ಮುಖ್ಯಗುರುಗಳಾಗಿದ್ದು, ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ನ.25ರಂದು ಬೆಳಗ್ಗೆ ಬೊಳುವಾರಿನ ವಾಸವಿದ್ದ ರೂಂನಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ