

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿಯಲ್ಲಿನ ಏಕವ್ಯಕ್ತಿ ಧೋರಣೆ ಕಡಿವಾಣ ಹಾಕಲು ಸಮನ್ವಯ ಸಹಕಾರ ಬಳಗ ಮುಂದಾಗಲಿದೆ.ಡಿ.23 ರಂದು ನಡೆಯುವ ಸಹಕಾರಿ ಸಂಘದ ಚುನಾವಣೆಯಲ್ಲಿ ಸಮನ್ವಯ ಸಹಕಾರ ಬಳಗ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಸಂಸ್ಥೆಯಲ್ಲಿ ಏಕ ವ್ಯಕ್ತಿ ಪಾರುಪಥ್ಯವನ್ನು ಹತ್ತಿಕ್ಕುವ ಕೆಲಸ ಮಾಡುವುದರ ಜೊತೆಗೆ ಯುವಕರಿಗೆ, ಮಹಿಳೆಯರಿಗೆ ಇತರ ಹಿಂದುಳಿದವರಿಗೂ ಸಮಾನ ಅವಕಾಶ ದೊರೆಯುವಂತೆ ಮಾಡುತ್ತೇವೆ ಎಂದು ಮನೀಷ್ ಗೂನಡ್ಕ ಹೇಳಿದ್ದಾರೆ.ಅವರು ಸುಳ್ಯದಲ್ಲಿ ಸುದ್ದಿಗೋಸ್ಟಿನಡೆಸಿ ಮಾತನಾಡಿ.

ಸಹಕಾರ ‘ ಎಂಬ ಶಬ್ದದಲ್ಲಿಯೇ ಸೌಹಾರ್ದತೆ, ಸಹೋ ದರತೆ ಹಾಗೂ ಹೃದಯ ವೈ ಶಾಲ್ಯತೆಯ ಮಕರಂದ ಜಿನುಗುತ್ತದೆ .’ ಸಹಕಾರ ‘ ದಿಂದ ಸಹಬಾಳ್ವೆ , ‘ ಸಹಕಾರ ‘ ದಿಂದ ಗ್ರಾಮೋ ದ್ಧಾರ . ಇದು ಸಹಕಾರ ಚಳುವಳಿಯ ಘೋಷವಾಕ್ಯ . ಸಂಪತ್ತು ಏಕಸ್ವಾಮ್ಯದ ಆಧಾರದಲ್ಲಿ ಕ್ರೂಢೀಕರಣಗೊಳ್ಳದೇ ಸರ್ವರಿಗೂ ಸಮಬಾಳು , ಸಮಪಾಲು ಎಂಬ ಆಶಯ . ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ. ತಾಲೂಕಿನ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವು ಶತಮಾನದ ಸಂಭ್ರಮವನ್ನು ಅನುಭವಿಸಿದೆ . ಕಳೆದ 10 , 15 ಮತ್ತು ಅದಕ್ಕೂ ಮೀರಿದ ವರ್ಷ ಗಳಿಂದ ನಿರ್ದೇ ಶಕರಾಗಿರುವವರು ಮುಕ್ತಮನಸ್ಸಿ ನಿಂದ ಯುವಜನತೆಗೆ, ಮಹಿಳೆಯರಿಗೆ , ಮೂಲ ನಿವಾಸಿ

ದಲಿತ ಸಮುದಾಯದವರಿಗೆ, ನೈಜ ಕಾರ್ಮಿಕರಿಗೆ ಅವಕಾಶ ಮಾಡಿಕೊಡಬೇಕು . ತನ್ಮೂಲಕ ‘ ಸಂವಿಧಾನ ‘ ದ ಆಶಯವನ್ನು ಈಡೇರಿಸಬೇ ಕು . ಪ್ರಜಾಪ್ರಭುತ್ವವನ್ನು ಗೌರವಿಸಬೇಕು . ಗಾಂಧಿ ಚಿಂತನೆ , ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ದೂರದೃಷ್ಟಿತ್ವವನ್ನು ಪುರಸ್ಕರಿಸಬೇಕು .
“ ಸಹಕಾರಿ ರಂಗ “ ದಲ್ಲಿ ಯಾವುದೇ ಒಬ್ಬ ಸದಸ್ಯ ಕೇವಲ ಒಂದು ಪಾಲನ್ನು ಪಡೆದು ನಿರ್ದೇಶಕನಾಗಿ , ಅಧ್ಯಕ್ಷನಾಗಬಹುದು . ಬಡವ – ಬಲ್ಲಿದ , ಅಕ್ಷರಸ್ಥ- ಅನಕ್ಷರಸ್ಥ, ಜಾತಿ – ಮತ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶವಿದೆ . ಕುಟುಂಬ ಸದಸ್ಯನಂತೆ “ ಸಹಕಾರಿ ಸಂಸ್ಥೆ “ ಯಲ್ಲಿ ಸಮಾನ ಅಧಿಕಾರ ಮತ್ತು ಸಂಪತ್ತಿನ ಸಮಾನ ಒಡೆತನ ಇರುತ್ತದೆ .ಒಟ್ಟಾರೆಯಾಗಿ ಸಹಕಾರಿ ಧ್ಯೇಯದಂತೆ “ಸಮಪಾಲು ಸಮಬಾಳು“ ಆಗಿರಬೇಕು. ಆದರೆ “ ಸಂಪಾಜೆ ಸಹಕಾರಿ ಸಂಘ “ ಸದಸ್ಯ ಆಧಾರಿತವಾಗದೇ ಏಕವ್ಯಕ್ತಿ ಆಧಾರಿತವಾಗಿದೆ. “ಪ್ರಶ್ನಾತೀತ ನಾಯಕ“ ಸಹಕಾರಿ ರಂಗದಲ್ಲಿ ಅತ್ಯಂತ ಅಪಾಯಕಾರಿ ಬೆಳವಣಿಗೆ . ಮಹಿಳಾ ಸಶಕ್ತೀಕರಣ ‘ ಸಿದ್ಧಾಂತವನ್ನು ಸಂಪಾಜೆ ಸೊಸೈಟಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಹಣಿಯಲಾಗಿದೆ . ಮಹಿಳೆಯರ ಪಾಲುದಾರಿಕೆ ಪಕ್ಷ ರಾಜಕಾರಣದ ಪ್ರಭಾವ , ಸ್ವಹಿತಾಸಕ್ತಿಯ ಕಾರಣದಿಂದ ‘ ಸಹಕಾರ ‘ ದ ಮೂಲ ಆಶಯಕ್ಕೆ ದಕ್ಕೆಯಾಗಿರುವುದು ಅತ್ಯಂತ ಖೇದಕರ ಸಂಗತಿ ಎಂದು ಹೇಳಿದರು , ಸಂಘದ ಸದಸ್ಯ ಧನಪಾಲ ಗೂನಡ್ಕ ಮಾತನಾಡಿ ಸಂಘದ ಈಗಿರುವ ಆಡಳಿತ ಮಂಡಳಿ ಹಾಗೂ ಸಿಬ್ಭಂದಿಗಳು ವ್ಯವಸ್ಥಿತವಾಗಿ ಬಡವರ ಹಿಂದುಳಿದವರ, ಯುವಕರ ಮಹಿಳೆಯರ ಮತದಾನದ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ.ಕೇವಲ 672 ಸದಸ್ಯರು – ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ . ಇದರ ಆಡಳಿತ ಮಂಡಳಿ ಚುನಾವಣೆಗೆ ಸಂಘದ ಬೈಲಾ ಹಾಗೂ ಸಹಕಾರಿ ಸಂಘಗಳ ಕಾಯ್ದೆಯನುಸಾರ ಮತದಾನ ಹಕ್ಕುಳ್ಳ ಅರ್ಹ ಸದಸ್ಯರ ಕರಡು ಪಟ್ಟಿಯಲ್ಲಿ ಕೇವಲ 672 ಮಂದಿಗಷ್ಟೇ ಮತದಾನದ ಅವಕಾಶವಿದೆ . ಇದು ಗ್ರಾಮದ ಜನಸಂಖ್ಯೆಯ ಶೇಕಡಾ 20 ಕ್ಕಿಂತಲೂ ( 20 % ) ಕಡಿಮೆ . ಒಟ್ಟಾರೆಯಾಗಿ ‘ ಸಂಪಾಜೆ ಸೊಸೈಟಿ ‘ ಯು ಪಟ್ಟಭದ್ರ ಹಿತಾಸಕ್ತಿಯುಳ್ಳ ಕೆಲವೇ ಕೆಲವು ವ್ಯಕ್ತಿಗಳ ಕಪಿಮುಷ್ಠಿಯಲ್ಲಿ ನರಳುತ್ತಿದೆ ಎನ್ನುವುದಕ್ಕೆ ಪ್ರಮುಖ ಸಾಕ್ಷಿಯಾಗಿದೆ.
ಸಂಪಾಜೆ ಸೊಸೈಟಿ ‘ ಯಲ್ಲಿರುವ ಸ್ವಹಿತಾಸಕ್ತಿಯುಳ್ಳ ವಯೋವೃದ್ಧರು ‘ ಯುವಜನತೆ ‘ ಯನ್ನು ಅವರ ಅವಕಾಶದಿಂದ ವಂಚಿಸುತ್ತಿದ್ದಾರೆ . ವಿದ್ಯಾವಂತರು , ಬುದ್ಧಿವಂತ , ಪ್ರಾಮಾಣಿಕ ವ್ಯಕ್ತಿಗಳನ್ನು ವ್ಯವಸ್ಥಿತವಾಗಿ ಹಣಿಯುತ್ತಿದ್ದಾರೆ .
ಸಂವಿಧಾನ ಶಿಲ್ಪಿ ಡಾ| B.R ಅಂಬೇಡ್ಕರರ ದೂರದೃಷ್ಟಿ ಚಿಂತನೆ , ಗಾಂಧಿ ತತ್ವ , ಸಂವಿಧಾನ , ಪ್ರಜಾಪ್ರಭುತ್ವವನ್ನು ‘
ಸಹಕಾರಿ ರಂಗ’ದಲ್ಲಿ ಉಳಿಸುವ ಧ್ಯೇಯ ನಿಷ್ಠೆಯೊಂದಿಗೆ ದಿನಾಂಕ 23/12/2024 ರಂದು ನಡೆಯುವ ‘ ಸಂಪಾಜೆ ಸೊ ಸೈಟಿ ‘ ಚುನಾವಣೆಯಲ್ಲಿ ” ಸಮನ್ವಯ ಸಹಕಾರಿ ಬಳಗ ” ವು ಸ್ಪರ್ಧಿಸುತ್ತದೆ . ಸಹಕಾರಿ ಕ್ಷೇತ್ರದಲ್ಲಿ ಯುವಜನತೆ , ಮಹಿಳೆಯರು ಮತ್ತು ಅಬಲ ವರ್ಗಗಳು – ಸರ್ವರಿಗೂ ಸಮಬಾಳು,ಸಮಪಾಲು ಎಂಬ ‘ಸಂವಿಧಾನ’ದ ಆಶಯವನ್ನು ಈಡೇರಿಸಲು “ಸಮನ್ವಯ ಸಹಕಾರಿ ಬಳಗ” ವು ದಿನಾಂಕ 23 ಡಿಸೆಂಬರ್ 2024 ರಂದು
ನಡೆಯುವ ‘ ಸಂಪಾಜೆ ಸೊಸೈಟಿ ‘ ಚುನಾವಣೆಯಲ್ಲಿ ಸ್ಪರ್ಧಿ ಸುತ್ತದೆ ಎಂದು ಹೇಳಿದರು.ಸುದ್ದಿಗೋಸ್ಟಿಯಲ್ಲಿ
ಗಣೇಶ್ ಎಸ್ ಪಿ,ಯೋಗಿಶ್ ದಂಡಕಜೆ,ಚಂದ್ರಶೇಕರ ಪಿ ಎಸ್ ,ಸನತ್ ಪೆರಂಗೋಡಿ ,ಕುಶಲಪ್ಪ ಪೇರಡ್ಕ ,
ಶಿವಪ್ರಸಾದ್ ಗೂನಡ್ಕ ,ದೀಪಕ್ ಪೇರಡ್ಕ ,ಬಾಲಚಂದ್ರ ಪೆಲ್ತಡ್ಕ ,ಸುಧಾಕರ ಪೆಲ್ತಡ್ಕ ,ಲೋಹಿತ್ ದೊಡ್ಡಡ್ಕ
ಮನೋಜ್ ಗೂನಡ್ಕ ಬೈಲೆ ,ಹೊನ್ನಪ್ಪ ಕೆ.ಕೆ
ಸುರೇಶ್ ಕಡೆಪಾಲ ,ರೇಶ್ಮ ಪಿ.ಕೆ ,ಶ್ವೇತ ವರಧರಾಜ್ ,
ಕವಿತ ಪೆರಂಗೋಡಿ ,ಶುಭಲತ ಪೆರಂಗೋಡಿ ,ಅನನ್ಯ ಮನೋಜ್ ,ಶ್ರೀ ನಿಧಿ ಕದಿಕಡ್ಕ ,ಜಗದೀಶ್ ದೊಡ್ಡಡ್ಕ
ಗುರುಪ್ರಸಾದ್ ದಾಸ್ ಬೈಲೆ,ಅನಿಲ್ ಗೂನಡ್ಕ ಮೊದಲಾದವರಿದ್ದರು.

