
ಸುಳ್ಯ ನಗರ ಪಂಚಾಯಿತಿನಿಂದ ನಿರ್ಮಿಸಲ್ಪಟ್ಟ ಜ್ಯೋತಿ ಸರ್ಕಲ್ ನಿಂದ ನಿರೀಕ್ಷಣಾ ಮಂದಿರದ ರಸ್ತೆಯ ಬಲಬದಿಯಲ್ಲಿರುವ ನೂತನ ಉದ್ಯಾನವನಕ್ಕೆ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಹೆಸರನ್ನು ಇಡಲು ಹಾಗು ಅವರ ಪುತ್ತಲಿಯನ್ನು ನಿರ್ಮಿಸಬೇಕೆಂದು ರಾಷ್ಟ್ರ ಅಭಿಮಾನಿಗಳ ಬಳಗ ಶ್ರೀ ರಾಮ್ ಪೇಟೆ ಸುಳ್ಯ ದ ಕ ಇದರ ವತಿಯಿಂದ ನಗರ ಪಂಚಾಯಿತಿಗೆ ಉಪಾಧ್ಯಕ್ಷ ರಾದ ಬುದ್ಧ ನಾಯ್ಕ ಇವರಲ್ಲಿ ಮನವಿಯನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ರಾಷ್ಟ್ರ ಅಭಿಮಾನಿಗಳ ಪರವಾಗಿ ಸಂಚಾಲಕರಾದ ಉಮೇಶ್ ಪಿಕೆ ಹಾಗೂ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷರಾದ ಭಾಸ್ಕರ್ ರಾವ್ ಶ್ರೀದೇವಿ ನಾಗರಾಜ ಭಟ್ ನ್ಯಾಯವಾದಿ ಜಗದೀಶ್ ನಾರಾಯಣ ಎಸ್ ಎಂ ಇವರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು….


