ಬಂಟ್ವಾಳ: ಟೆಂಪೋ ವಾಹನದಡಿಗೆ ಸಿಲುಕಿ ಮೂರು ವರ್ಷದ ಮಗು ಸಾವು..

ಬಂಟ್ವಾಳ: ಟೆಂಪೋ ವಾಹನದಡಿಗೆ ಸಿಲುಕಿ ಮೂರು ವರ್ಷದ ಮಗು ಸಾವು..

.

ಬಂಟ್ವಾಳ: ನಿಲ್ಲಿಸಿದ್ದ ಟೆಂಪೋವೊಂದು ಏಕಾಏಕಿ ಹಿಮ್ಮುಖವಾಗಿ ಚಲಿಸಿದ್ದು, ಆ ವೇಳೆ ಆಟವಾಡುತ್ತಿದ್ದ ಮುರು ವರ್ಷದ ಮಗು ಚಕ್ರದಡಿಗೆ ಸಿಲುಕಿ ಮೃತಪಟ್ಟ ಘಟನೆ ಬುಧವಾರ (ನ.6) ಬಂಟ್ವಾಳದ ಲೊರೆಟ್ಟೋಪದವಿನ ಟಿಪ್ಪುನಗರದಲ್ಲಿ ನಡೆದಿದೆ.

ಫರಂಗಿಪೇಟೆ ಸಮೀಪದ ಪತ್ತನಬೈಲು ನಿವಾಸಿ ಆಶೀಕಾ (3) ಮೃತ ಮಗು.

ಮಗು ತನ್ನ ಅಜ್ಜಿ ಮನೆಯಲ್ಲಿದ್ದು, ಮನೆಯ ಹೊರಗೆ ಮಗು ಆಡುತ್ತಿದ್ದ ವೇಳೆ ಅಂಗಳದಲ್ಲಿ ನಿಲ್ಲಿಸಿದ್ದ ಟೆಂಪೋ ಒಮ್ಮೆಯೇ ಹಿಂದೆ ಬಂದ ಕಾರಣ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ