
ಸುಳ್ಯದ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಎಲಿಮಲೆಯ ಹತ್ತನೇ ತರಗತಿ ಅಪ್ರಾಪ್ತ ಹಿಂದೂ ಹುಡುಗಿ ಜೊತೆ ಮೊಬೈಲ್ ನಲ್ಲಿ ಚಾಟ್ ಮಾಡಿರುವ ವಿಷಯಕ್ಕೆ ಸಂಭಂದಿಸಿ, ಬಾಲಕಿಯ ಕಡೆಯವರು ಯುವಕನನ್ನು ವಿಚಾರೆಣೆಗೆಂದು ಕರೆದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಬಂದಿದ್ದು, ಆರೋಪಿಸಿದ ಅಪ್ರಾಪ್ತ ಯುವಕ ಆಸ್ಪತ್ರೆಗೆ ದಾಖಲಾಗಿ ಹಲ್ಲೆ ನಡೆಸಿದವರ ವಿರುದ್ದ ದೂರು ನೀಡಿರುವ ಘಟನೆ ವರದಿಯಾಗಿದೆ.

ಹತ್ತನೆ ತರಗತಿಯ ಹಿಂದೂ ಬಾಲಕಿಗೆ ಪಿಯುಸಿಯ ಮುಸ್ಲೀಂ ಯುವಕ ಮೆಸೇಜ್ ಮಾಡಿದ್ದಾನೆ ಎಂದು ತಿಳಿದು ಬಾಲಕಿ ಕಡೆಯವರು ವಿಚಾರಿಸಿದ್ದಾರೆ .ಈ ವೇಳೆ ಯುವಕ ತಾನು ಮೆಸೇಜ್ ಮಾಡಿಲ್ಲ ಎಂದು ವಾದಿಸಿದ್ದು ಅಲ್ಲಿ ಸೇರಿದವರು ಯುವಕನಿಗೆ ಎರಡೇಟು ಬಿಗಿದಿದ್ದಾರೆ ಎನ್ನಲಾಗಿದೆ,
ಪೆಟ್ಟು ತಿಂದ ಯುವಕ ಇದೀಗ ಸುಳ್ಯದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಘಟನೆ ಎರಡೂ ಬಿನ್ನ ಸಮುದಾಯದೊಳಗೆ ಸಂಭಂದಿಸಿರುವುದರಿಂದ ಪರಿಸ್ಥಿತಿ ಸೂಕ್ಷ್ಮವಾಗಿದೆ.
