ಅಬ್ಬಬ್ಬಾ..ಸುಳ್ಯ ದಸರಾ.. ಎಷ್ಟೊಂದು ಸುಂದರಾ….!ನಾಡಿಗರ ಮನ ಸೂರೆಗೊಂಡ ಸ್ಥಬ್ಧಚಿತ್ರಗಳ ಶೋಭಾಯಾತ್ರೆ..ನಗರದಾಧ್ಯಂತ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ನಿಂತ ಜನಸ್ತೋಮ.. 

ಅಬ್ಬಬ್ಬಾ..ಸುಳ್ಯ ದಸರಾ.. ಎಷ್ಟೊಂದು ಸುಂದರಾ….!ನಾಡಿಗರ ಮನ ಸೂರೆಗೊಂಡ ಸ್ಥಬ್ಧಚಿತ್ರಗಳ ಶೋಭಾಯಾತ್ರೆ..ನಗರದಾಧ್ಯಂತ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ನಿಂತ ಜನಸ್ತೋಮ.. 

 

ಸುಳ್ಯ ದಸರಾ ಹೊಸ ಇತಿಹಾಸ ಮಾಡಿದೆ, ಐತಿಹಾಸಿಕವಾಗಿ ಜನರು ತಂಡೋಪ ತಂಡವಾಗಿ ಬಂದು ಸುಳ್ಯ ದಸರಾದಲ್ಲಿ ಸ್ಥಬ್ಧಚಿತ್ರಗಳ ಶೋಭಾಯಾತ್ರೆ ಕಂಡು ಪುಳಕಿತರಾಗಿದ್ದಾರೆ.

ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಹಲವು ವೈದಿಕ – ಧಾರ್ಮಿಕ, ಸಾಂಸ್ಕೃತಿಕ ಸಭಾ ಕಾರ್ಯಕ್ರಮದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿದ ಶ್ರೀ ಶಾರದಾಂಬ ಉತ್ಸವದ ಶೋಭಾಯಾತ್ರೆ ಸುಳ್ಯದ ನಗರದಾದ್ಯಂತ ಸಂಚರಿಸಿದೆ.ಕಿವಿ ಗಡಚಿಕ್ಕುವ ಡಿಜೆ ಶಬ್ಧಕ್ಕೆ ಯುವ ಜನತೆಯ ಹೆಜ್ಜೆಯ ಸಪ್ಪಳ  ಇನ್ನಷ್ಟು ಹೆಚ್ಚಿಸಿತ್ತು,  ಪುಟಾಣಿ ಮಕ್ಕಳಿಂದ ಹಿಡಿದು ಯುವಕರ ಹುಲಿ ವೇಷ ,  ಆಕರ್ಷಕ ಬೊಂಬೆ ಕುಣಿತ ಹೀಗೆ ಹತ್ತು ಹಲವು ಪ್ರದರ್ಶನ ಜನರ ಮನಸೂರೆಗೊಳಿಸಿತು.

ಧ್ವನಿ ಬೆಳಕು ಶಾಮಿಯಾನದ ಕೇರಳ ಶೈಲಿಯ ನೃತ್ಯ ಟ್ಯಾಬ್ಲೋ, ಕಾರ್ಗಿಲ್ ಬಾಯ್ಸ್ ತಂಡದ ಮತ್ಸ್ಯಾವತಾರದ ಟ್ಯಾಬ್ಲೋ, ಟೀಂ ಜಟಾಯು ತಂಡದ ನವರಾತ್ರಿ ವಿಶೇಷ ಟ್ಯಾಬ್ಲೋ, ಡಿ.ಜೆ. ಫ್ರೆಂಡ್ಸ್ ಹುಲಿವೇಷ ಕುಣಿತ, ಕೇರ್ಪಳ ದುರ್ಗಾಪರಮೇಶ್ವರಿ ಕುಣಿತ ಭಜನಾ ತಂಡ, ವಿಷ್ಣುಸರ್ಕಲ್ ವೀರಕೇಸರಿ ಶ್ರೀರಾಮ ಹನುಮಂತನ ಟ್ಯಾಬ್ಲೋ, ಮಂಜು ಬ್ರದರ್ಸ್ ನೃತ್ಯ ಟ್ಯಾಬ್ಲೋ , ಗಜಕೇಸರಿಯ ಟ್ಯಾಬ್ಲೋ, ಅರಣ್ಯ ಇಲಾಖೆಯ ಕಾಡುಸಂರಕ್ಷಣಾ ಟ್ಯಾಬ್ಲೋ ಸೇರಿದಂತೆ ,ಹಲವು ಟ್ಯಾಬ್ಲೂ ಒಂದರ ಹಿಂದೆ ಒಂದರಂತೆ ಸಾಗಿ ಹಬ್ಬದ ವಾತಾವರಣ ನಿರ್ಮಿಸಿತು.

ರಾಜ್ಯ