
ಜನ ನಂಬಿದ್ರೆ ನಂಬಿಸುವವರು ಹಲವರು, ಜನರ ಮುಗ್ಧತೆಯನ್ನು , ಮರಳು ಮಾಡಲು ಯತ್ನಿಸುವವರು ಹಲವರು, ಈ ಮಾತು ಸುಳ್ಯ ಮಟ್ಟಿಗೆ ಮತ್ತೆ ಸಾಬೀತಾಗಿದೆ. ಹೌದು ಕಳೆದೆರಡು ದಿನಗಳ ಹಿಂದೆ ಅಜ್ಜಾವರದ ಶಾಂತಿಮಜಲಿನ ಮನೆಯೊಂದರಲ್ಲಿ ತುಳಸಿ ಗಿಡದಲ್ಲಿ ದಾಸವಾಳ ಅರಳಿದೆ ಎಂಬ ಸುದ್ದಿಯಾಗಿತ್ತು , ಹಲವು ಸುಳ್ಯದ ಮಾಧ್ಯಮಗಳು ಇದನ್ನು ಸತ್ಯವೆಂದು ನಂಬಿ ಸುದ್ದಿಯನ್ನೂ ಮಾಡಿದ್ದರು, ಜನರು ಸುದ್ದಿಕೇಳಿ ನಿಬ್ಬೆರಗಾಗಿದ್ದು ಹೌದು, ಆದರೆ ಎರಡು ದಿನ ಕಳೆಯುವುದೊರಳಗೆ ಇದ್ದು ಸುಳ್ಳು ಸುದ್ದಿಯೆಂದು ಗೊತ್ತಾಗಿದ್ದು ಜನರು, ಹಾದಿ ಬೀದಿಯಲ್ಲಿ ನಗುವಂತಾಗಿದೆ, ದಾಸವಳ ಹೂವನ್ನು ತುಳಸಿ ಗಿಡಕ್ಕೆ ತುರುಕಿಸಿ ಪೋಟೊ , ವೀಡಿಯೊ ಹರಿ ಬಿಡಲಾಗಿತ್ತು, ಅದು ಸಾಕಷ್ಟು ವೈರಲ್ ಆಗಿತ್ತು , ಆದರೆ ಮಾದ್ಯಮ ವೊಂದು ಇದಕ್ಕೆ ತಾರ್ಕಿಕ ವಿಶ್ಲೇಷಣೆಗೆ ಇಳಿದ ಬಳಿಕ ನಿಜ ಬಣ್ಣ ಬಯಲಾಗಿದೆ. ಇನ್ನೀಗ ಇದೇ ವೀಡಿಯೊ ಮತ್ತೆ ಟ್ರೋಲ್ ಆಗುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ…!


