ಕಾರ್ಕಳ : ಸಿಡಿಲು ಬಡಿದು ಓರ್ವ ಬಾಲಕ ಸಹಿತ ಇಬ್ಬರಿಗೆ ಗಾಯ .

ಕಾರ್ಕಳ : ಸಿಡಿಲು ಬಡಿದು ಓರ್ವ ಬಾಲಕ ಸಹಿತ ಇಬ್ಬರಿಗೆ ಗಾಯ .

ಕಾರ್ಕಳ : ಗುಡುಗು ಸಹಿತ ಭಾರೀ ಮಳೆಯಾದ ಹಿನ್ನಲೆ ಸಿಡಿಲು ಬಡಿದು ಮೂವರು ಗಾಯಗೊಂಡಿರುವ ಘಟನೆ  ಸಂಜೆ ಕಾರ್ಕಳದಲ್ಲಿ ನಡೆದಿದೆ.

ಬಜಗೋಳಿ, ಮಿಯ್ಯಾರು ಭಾಗದಲ್ಲಿ ಸಿಡಿಲಿನ ತೀವ್ರತೆ ಹೆಚ್ಚಿತ್ತು. ಮಿಯ್ಯಾರು ಕೈಗಾರಿಕ ಪ್ರಾಂಗಣ ವ್ಯಾಪ್ತಿಯ ಮೊರಾರ್ಜಿ ಶಾಲೆ ಬಳಿ ಸಂಭವಿಸಿದ ಸಿಡಿಲಾಘಾತಕ್ಕೆ ಇಬ್ಬರು ಕಾರ್ಮಿಕರು ಹಾಗೂ ಓರ್ವ ಬಾಲಕ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಮಿಳು ಮೂಲದ ಸುಬ್ರಹ್ಮಣ್ಯ, ಆನಂದ, ಸುರೇಶ ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ತಕ್ಷಣವೇ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಡಿಲಿನ ತೀವ್ರತೆಗೆ ಮೈ ಮೇಲೆ ಸುಟ್ಟಂತ ಗಾಯಗಳು ಕಾಣಿಸಿಕೊಂಡಿವೆ. ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ

ರಾಜ್ಯ