
ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂ..ಕುಂ.. ಫ್ಯಾಶನ್ ನವರ ಸಹ ಸಂಸ್ಥೆ ರೊಮ್ಯಾಂಟಿಕ್ ವಸ್ತ್ರ ಮಳಿಗೆ ಸುಳ್ಯ ರಥಬೀದಿಯಲ್ಲಿನ ನಂದಿನಿ ಟವರ್‍ಸ್‌ನಲ್ಲಿ ಶುಭಾರಂಭಗೊಂಡಿತು.


ನಂದಿನಿ ಟವರ್‍ಸ್ ಮಾಲಕ, ಹಿರಿಯರಾದ ಗುಡ್ಡಪ್ಪ ರೈ ಮೇನಾಲರು ನೂತನ ವಸ್ತ್ರ ಮಳಿಗೆಯಲ್ಲಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರೆ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ.ಯವರು ದೀಪ ಪ್ರಜ್ವಲನೆಗೊಳಿಸಿದರು.

ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಕುಂ..ಕುಂ.. ಫ್ಯಾಶನ್ ಸಂಸ್ಥೆ ಕಾರ್ಯಾಚರಿಸುತ್ತಿರುವ ಕಟ್ಟಡದ ಮಾಲಕರಾದ ಪ್ರೇಮಲತಾ, ನ.ಪಂ. ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಹಿರಿಯ ಉದ್ಯಮಿಗಳಾದ ಕೃಷ್ಣ ಕಾಮತ್, ಕಟ್ಟೆಕಾರ್ ಅಬುಲ್ಲ, ಅಮರಸುಳ್ಯ ರಮಣೀಯ ಸುಳ್ಯ ತಂಡದ ಪ್ರಭಾಕರ್ ನಾಯರ್, ಸುಳ್ಯ ನ.ಪಂ. ಸದಸ್ಯ ರಾಜು ಪಂಡಿತ್, ಉದ್ಯಮಿ ಶಾಫಿ ಕುತ್ತಮೊಟ್ಟೆ ಮುಖ್ಯ ಅತಿಥಿಗಳಾಗಿದ್ದರು.

ನೂತನ ಸಂಸ್ಥೆಯಲ್ಲಿ ಬ್ಯಾಂಡೆಡ್ ವಸ್ತ್ರಗಳ ಮಳಿಗೆಯಾಗಿದ್ದು, ಇನ್ನರ್ ವೇರ್, ಹೋಮ್ ವೇರ್, ಹ್ಯಾಂಡ್‌ಲೂಮ್, ಕುರ್ತಿಸ್, ನ್ಯೂ ಬೋರ್‍ನ್ ವೇರ್, ವೆಸ್ಟರ್‍ನ್ ವೇರ್ ಗಳ ಅಪೂರ್ವ ಸಂಗ್ರಹಗಳಿವೆ.ಸಂಸ್ಥೆಯ ಮಾಲಕರಾದ ಭೀಮ್ ರಾಮ್ ಹಾಗೂ ಧನ್ ರಾಮ್ ಸ್ವಾಗತಿಸಿದರು
ವಿ.ಜೆ. ವಿಖ್ಯಾತ್ ಬಾರ್ಪಣೆ , ಕಾರ್ಯಕ್ರಮ ನಿರೂಪಣೆ ಮಾಡಿದರು
