ಪ್ರಯಾಣಿಕರ ನಿದ್ರೆಗೆ ರೈಲ್ವೇ ಇಲಾಖೆ-ಹೊಸ ರೂಲ್ಸ್‌..!ನಿರ್ದಿಷ್ಟ ಸಮಯ ಸಮಯ ಮತ್ತು ನಿಗದಿಪಡಿಸಿದ ಸಮಯ ಮೀರಿದ್ರೆ  ದಂಡ 

ಪ್ರಯಾಣಿಕರ ನಿದ್ರೆಗೆ ರೈಲ್ವೇ ಇಲಾಖೆ-ಹೊಸ ರೂಲ್ಸ್‌..!ನಿರ್ದಿಷ್ಟ ಸಮಯ ಸಮಯ ಮತ್ತು ನಿಗದಿಪಡಿಸಿದ ಸಮಯ ಮೀರಿದ್ರೆ  ದಂಡ 

 

ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಆಗಾಗ ತನ್ನ ನಿಯಮದಲ್ಲಿ ಬದಲಾಣೆ ತರ್ತಿರುತ್ತದೆ. ಪ್ರಯಾಣಿಕರು ರೈಲಿನ ರೂಲ್ಸ್ ತಿಳಿದಿರಬೇಕು. ಇಲ್ಲವೆಂದ್ರೆ ದಂಡ, ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ರೈಲಿನಲ್ಲಿ ಪ್ರಯಾಣಿಸುವವರು ಮಲಗುವ ಸಮಯವನ್ನು ತಿಳಿದಿರಬೇಕು. ರೈಲ್ವೆ ಇಲಾಖೆ ನಿದ್ರೆಗೆಂದೇ ನಿರ್ದಿಷ್ಟ ಸಮಯ ನಿಗದಿಪಡಿಸಿದೆ.

ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಆಗಾಗ ತನ್ನ ನಿಯಮದಲ್ಲಿ ಬದಲಾಣೆ ತರ್ತಿರುತ್ತದೆ. ಪ್ರಯಾಣಿಕರು ರೈಲಿನ ರೂಲ್ಸ್ ತಿಳಿದಿರಬೇಕು. ಇಲ್ಲವೆಂದ್ರೆ ದಂಡ, ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ರೈಲಿನಲ್ಲಿ ಪ್ರಯಾಣಿಸುವವರು ಮಲಗುವ ಸಮಯವನ್ನು ತಿಳಿದಿರಬೇಕು. ರೈಲ್ವೆ ಇಲಾಖೆ ನಿದ್ರೆಗೆಂದೇ ನಿರ್ದಿಷ್ಟ ಸಮಯ ನಿಗದಿಪಡಿಸಿದೆ.

ರೈಲಿನಲ್ಲಿ ಆರಾಮವಾಗಿ ಮಲಗಿ ಹೋಗ್ಬಹುದು, ಗಂಟೆ 8 ಆದ್ರೂ ಏಳ್ಬೇಕು ಅನ್ನೋ ಕಿರಿಕಿರಿ ಇಲ್ಲ ಅಂತ ನೀವೇನಾದ್ರೂ ಟ್ರೈನ್ ಟಿಕೆಟ್ ಬುಕ್ ಮಾಡಿದ್ರೆ ಸ್ವಲ್ಪ ರೂಲ್ಸ್ ಬಗ್ಗೆ ಗಮನ ನೀಡಿ. ಇನ್ಮುಂದೆ ನೀವು ರೈಲಿನಲ್ಲಿ ಸರಿಯಾದ ಟೈಂಗೆ ಮಲಗ್ಬೇಕು, ಸರಿಯಾದ ಟೈಂಗೆ ಏಳ್ಬೇಕು. ಟೈಂ ತಪ್ಪಿದ್ರೆ ನಿಮ್ಮ ವಿರುದ್ಧ ಕ್ರಮಕೈಗೊಳ್ತಾರೆ.

ಭಾರತೀಯರ ಜೀವನಾಡಿ ರೈಲು. ಇದು ವಿಶ್ವದ ಅತಿ ದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ. ಭಾರತದ ಮೂಲೆ ಮೂಲೆಗೆ ರೈಲು ಸಂಪರ್ಕ ಹೊಂದಿದ್ದು, ಕಡಿಮೆ ಖರ್ಚಿನಲ್ಲಿ ಆರಾಮವಾಗಿ ಸಂಚಾರ ಬೆಳೆಸುವ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಒದಗಿಸುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಆಗಾಗ ತನ್ನ ನಿಯಮಗಳಲ್ಲಿ ಬದಲಾವಣೆ ತರ್ತಿರುತ್ತದೆ. ಕೆಲ ದಿನಗಳ ಹಿಂದೆ ರೈಲ್ವೆ ಇಲಾಖೆ, ಪ್ರಯಾಣಿಕರ ಮಲಗುವ ಸಮಯದಲ್ಲಿ ಬದಲಾವಣೆ ಮಾಡಿದೆ.

ಹಿಂದೆ ಪ್ರಯಾಣಿಕರು 9 ಗಂಟೆ ನಿದ್ರೆ ಮಾಡುವ ಅವಕಾಶವಿತ್ತು. ಅಂದ್ರೆ ನೀವು 9 ಗಂಟೆಯಿಂದ 6 ಗಂಟೆಯವರೆಗೆ ನಿದ್ರೆ ಮಾಡಲು ಅವಕಾಶವಿತ್ತು. ಆದ್ರೀಗ ರೈಲ್ವೆ ಇಲಾಖೆ ಈ ಸಮಯವನ್ನು 9 ರಿಂದ ಹತ್ತಕ್ಕೆ ಏರಿಸಿದೆ. ರೈಲು ಪ್ರಯಾಣಿಕರು 10 ಗಂಟೆ ಮೇಲೆಯೇ ಮಲಗಬೇಕು. ಸಾಮಾನ್ಯವಾಗಿ ಮೇಲಿನ ಬರ್ತ್ ಪ್ರಯಾಣಿಕರಿಗೆ ಇದ್ರಿಂದ ಯಾವುದೇ ಸಮಸ್ಯೆ ಆಗೋದಿಲ್ಲ. ಅವರು ಯಾವ ಸಮಯದಲ್ಲಿ ಬೇಕಾದ್ರೂ ಮಲಗಬಹುದು. ಅದೇ ಲೋವರ್ ಬರ್ತ್ ಹಾಗೂ ಮಧ್ಯ ಬರ್ತ್ ಬುಕ್ ಮಾಡಿದ ಪ್ರಯಾಣಿಕರಿಗೆ ಇದ್ರಿಂದ ಸದಾ ತೊಂದರೆ ಆಗುತ್ತದೆ.

ಮಧ್ಯ ಬರ್ತ್ ಬುಕ್ ಮಾಡಿದ ಪ್ರಯಾಣಿಕರು ಸದಾ ಮಲಗಿದ್ರೆ ಕೆಳಗಿನ ಬರ್ತ್ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಾಧ್ಯವಾಗೋದಿಲ್ಲ. ಅದೇ ಕೆಳ ಬರ್ತ್ ಪ್ರಯಾಣಿಕರು ಮಲಗಿದ್ರೂ ಮಧ್ಯದ ಬರ್ತ್ ಪ್ರಯಾಣಿಕರಿಗೆ ಕುಳಿತುಕೊಳ್ಳೋದು ಕಷ್ಟ. ಈ ಬಗ್ಗೆ ಈಗಾಗಲೇ ಅನೇಕ ದೂರುಗಳು ಹೋಗಿದ್ದವು. ರೈಲಿನಲ್ಲಿ ಈ ಸಂಬಂಧ ಪ್ರಯಾಣಿಕರ ಮಧ್ಯೆ ಸಾಕಷ್ಟು ಬಾರಿ ಕಿತ್ತಾಟ ನಡೆದಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಹೊಸ ರೂಲ್ಸ್ ಜಾರಿಗೆ ತಂದಿದೆ.

ಇನ್ಮುಂದೆ ರೈಲು ಪ್ರಯಾಣಿಕರು ರಾತ್ರಿ 10 ಗಂಟೆಗೆ ಮಲಗಿ 6 ಗಂಟೆಗೆ ಏಳಬೇಕು. ಈಗ ನಿದ್ರಿಸುವ ಸಮಯವನ್ನು ನಿಗದಿಪಡಿಸಿರುವುದರಿಂದ ಪ್ರಯಾಣಿಕರು ಯಾವುದೇ ಸಮಸ್ಯೆ ಎದುರಿಸುವುದಿಲ್ಲ. ನಿಯಮಗಳ ಪ್ರಕಾರ ಬೆಳಿಗ್ಗೆ 6 ಗಂಟೆಗೆ ಪ್ರಯಾಣಿಕರು ಎಚ್ಚರಗೊಳ್ಳಬೇಕು. ಪ್ರಯಾಣಿಕರು ಮಧ್ಯದ ಬರ್ತ್ ಅನ್ನು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಮಾತ್ರ ತೆರೆದಿಡಬಹುದು. ಇದಕ್ಕಿಂತ ಮೊದಲು ಅಥವಾ ನಂತ್ರ ಮಧ್ಯದ ಬರ್ತ್ ತೆರೆಯುವಂತಿಲ್ಲ. ಒಂದ್ವೇಳೆ ಆರು ಗಂಟೆ ನಂತ್ರ ನೀವು ಬರ್ತ್ ತೆರೆದಿಟ್ಟಿದ್ದರೆ ನಿಮ್ಮ ವಿರುದ್ಧ ಕ್ರಮಕೈಗೊಳ್ಳಬಹುದು. ಪ್ರಯಾಣಿಕರು ನಿಮ್ಮ ವಿರುದ್ಧ ದೂರು ದಾಖಲಿಸುವ ಅಧಿಕಾರ ಹೊಂದಿರುತ್ತಾರೆ.

ಹಿರಿಯ ನಾಗರಿಕರು, ಮಹಿಳೆಯರಿಗೆ ವಿಶೇಷ ಸೌಲಭ್ಯ:ರೈಲ್ವೆ ಇಲಾಖೆ, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗಾಗಿ ವಿಶೇಷ ಸೌಲಭ್ಯಗಳನ್ನು ಹೊಂದಿದೆ. ರೈಲ್ವೆ, 60 ವರ್ಷ ಮೇಲ್ಪಟ್ಟ ಪುರುಷರನ್ನು ಮತ್ತು 58 ವರ್ಷ ಮೇಲ್ಪಟ್ಟ ಮಹಿಳೆಯರನ್ನು ಹಿರಿಯ ನಾಗರಿಕರೆಂದು ಪರಿಗಣಿಸುತ್ತದೆ. ಟಿಕೆಟ್ ಮೀಸಲಾತಿ ವೇಳೆ ಹಿರಿಯ ನಾಗರಿಕರಿಗೆ ವಿಶೇಷ ವ್ಯವಸ್ಥೆ ಇದೆ. ಕೆಲ ರೈಲುಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸುವಾಗ ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ತೋರಿಸುತ್ತದೆ. ಭಾರತೀಯ ರೈಲ್ವೆಯ ಎಲ್ಲಾ ಕಾಯ್ದಿರಿಸಿದ ಕೋಚ್ ರೈಲುಗಳಲ್ಲಿ, ಕೆಲವು ಬರ್ತ್‌ಗಳನ್ನು ಹಿರಿಯ ನಾಗರಿಕರಿಗೆ ಕಾಯ್ದಿರಿಸಲಾಗಿದೆ. ನಿಯಮಗಳ ಪ್ರಕಾರ, ಎಲ್ಲಾ ಸ್ಲೀಪರ್ ಕೋಚ್‌ಗಳಲ್ಲಿ ಆರು ಲೋವರ್ ಬರ್ತ್‌ಗಳನ್ನು ಕಾಯ್ದಿರಿಸಲಾಗಿದೆ

ರಾಜ್ಯ