
ಸುಳ್ಯ: ಕಾಲೇಜು ವಿದ್ಯಾರ್ಥಿನಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿಕೇರಳ ಮೂಲದ ಯುವಕನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕಾಸರಗೋಡಿನ ಅಬ್ದುಲ್ ನಿಯಾಝ್ (22) ಪ್ರಯಾಣಿಸುತ್ತಿದ್ದ ಬೆಂಗಳೂರಿನಿಂದ ಸುಬ್ರಹ್ಮಣ್ಯ ಮೂಲಕ ಸುಳ್ಯಕ್ಕೆ ಬರುವ ಬಸ್ಗೆ ಸುಳ್ಯದ ಕಾಲೇಜಿನಲ್ಲಿ ಕಲಿಯುತ್ತಿರುವ ಸಕಲೇಶಪುರದ ವಿದ್ಯಾರ್ಥಿನಿಯೊಬ್ಬಳು ಹತ್ತಿದ್ದಳು ಬಳಿಕ ಕಾಲಿಯಿದ್ದ ಬಸ್ನಲ್ಲಿ ಆರೋಪಿಯ ಹತ್ತಿರ ಕುಳಿತಿದ್ದರು.

ಈ ವೇಳೆ ಯುವಕ ಆಕೆಯೊಡನೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ವಿಚಾರದ ಬಗ್ಗೆ ಯುವತಿ ಬಸ್ ನಿರ್ವಾಹಕ ಹಾಗೂ ಬಸ್ನಲ್ಲಿದ್ದವರಿಗೆ ತಿಳಿಸಿದ್ದು, ಅವರು ಯುವಕನ ನಡೆಯನ್ನು ಆಕ್ಷೇಪಿಸಿ ತರಾಟೆಗೆ ತೆಗೆದುಕೊಂಡಿದ್ದರು. ವಿಚಾರದ ಬಗ್ಗೆ ಯುವತಿ ಸುಳ್ಯದ ಸಂಘ ಪರಿವಾರದವ ಯುವಕರಿಗೆ ಮಾಹಿತಿ ನೀಡಿದ ಘಟನೆ ನಡೆದಿತ್ತು.
ಆರೋಪಿತ ಯುವಕ ಸುಬ್ರಹ್ಮಣ್ಯದಲ್ಲಿ ಬಸ್ನಿಂದ ಇಳಿದು ಬೇರೊಂದು ಬಸ್ಸಿನಲ್ಲಿ ಸುಳ್ಯಕ್ಕೆ ಆಗಮಿಸಿದ್ದು, ಸುಳ್ಯದ ಪೈಚಾರ್ ಎಂಬಲ್ಲಿ ಇಳಿದಿದ್ದಾನೆ. ಈ ವೇಳೆ ಅಲ್ಲಿದ್ದ ಯುವಕರು ಆರೋಪಿತ ಯುವಕನನ್ನು ಹಿಡಿದು ಕಾರಲ್ಲಿ ಕಿಡ್ನಾಪ್ ಮಾಡಿ ಸುಳ್ಯದ ಬಸ್ ನಿಲ್ದಾಣ ಸಮೀಪ ಕರೆತಂದು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಯುವಕ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಅಲ್ಲಿಂದ ತನ್ನೂರಿನ ಕಾಸರಗೋಡಿನ ಮುಳ್ಳೇರಿಯಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ,
ಸಂತ್ರಸ್ತ ವಿದ್ಯಾರ್ಥಿನಿ ಯುವಕ ತನ್ನ ಮೈಮುಟ್ಟಿ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿ ಮಾನಭಂಗಕ್ಕೆ ಪ್ರಯತ್ನಿಸಿ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ದೂರು ದಾಖಲಿಸಿದ್ದಳು , ಆದರೆ ಆರೋಪಿ ಚಿಕಿತ್ಸೆ ಪಡೆಯತ್ತಿದ್ದರಿಂದ ಪೋಲಿಸರು ಆತನನ್ನು ಬಂಧಿಸಿರಲಿಲ್ಲ, ಆದರೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಯುವಕನ ದೂರಿಗೆ ಸ್ಪಂದಿಸಿ ಪೋಲಿಸರು ಇಬ್ಬರು ಹಿಂದೂ ಯುವಕರನ್ನು ಬಂದಿಸಿ ಜೈಲಿಗಟ್ಟಿದ್ದರು, ಇದು ಹಿಂದು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ ಸುಳ್ಯ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು, ಮತ್ತು ಯುವತಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಕಾಸರಗೋಡು ತೆರಳಲು ಬಿಟ್ಟದ್ದು ಯಾಕೆ , ಆರೋಪಿಯನ್ನು ಬಂದಿಸಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದರು, ಇದೀಗ ಪೋಲಿಸರು ಆರೋಪಿ ಯುವಕನನ್ನು ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿ ಯುವಕ ಇದ್ದಾನೆ ಎಂದು ಹೇಳಲಾಗಿದೆ.