ಪೆರಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಸಭಾಭವನ ಮತ್ತು ಕಛೇರಿ ಉದ್ಘಾಟಿಸಿದ ಮೈಸೂರು – ಕೊಡಗು ಲೋಕಸಭಾ ಸಂಸದ ಯುದುವೀರ್ ಒಡೆಯರ್.

ಪೆರಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಸಭಾಭವನ ಮತ್ತು ಕಛೇರಿ ಉದ್ಘಾಟಿಸಿದ ಮೈಸೂರು – ಕೊಡಗು ಲೋಕಸಭಾ ಸಂಸದ ಯುದುವೀರ್ ಒಡೆಯರ್.

ಸಹಕಾರ ಸಂಘಗಳು ಭಾರತದಲ್ಲಿನ ಅತ್ಯದ್ಭುತ ವ್ಯವಸ್ಥೆ, ಜನರಿಗೆ ಸ್ವಾವಲಂಬಿ ಬದುಕು ಕಲ್ಪಿಸಿದೆ,ಎಂದು ಮೈಸೂರು – ಕೊಡಗು ಲೋಕಸಭಾ ಸಂಸದ ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಮತ ವ್ಯಕ್ತಪಡಿಸಿದ್ದಾರೆ. ಅವರು ಸೆ 10 ರಂದು ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಭವನ ಮತ್ತು ಕಛೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ  ಸಭೆಯನ್ನು ಉದ್ಘಾಟಿಸಿ ಮಾತನಾಡಿದರು,ಈ ಭಾಗಕ್ಕೆ ತಾನು ಹಿಂದೆ ಬೇಟಿ ನೀಡಿ ಇಲ್ಲಿಯ ಯಕ್ಷಗಾನದ ಸವಿಯನ್ನು ಅನುಭವಿಸಿದ್ದೇನೆ, ಸುಂದರ ಪ್ರಕೃತಿ ತಾಣದಲ್ಲಿ ಸದೃಡ ಕಟ್ಟಡ ಬೆಳೆದು ನಿಂತಿದೆ,ಈ ಊರಿನ ಅಭಿವೃದ್ದಿಗೆ ಅವಕಾಶವನ್ನು ಈ ಭಾಗದ ಜನ ನೀಡಿದ್ದಾರೆ, ಇಲ್ಲಿನ ಜ್ವಲಂತ ಸಮಸ್ಯೆಗಳ ಅರಿವಿದೆ,ಈ ಎಲ್ಲಾ  ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ, ಕೊಡಗು ಮೈಸೂರು ರೈಲು ಸಂಪರ್ಕ ವ್ಯವಸ್ಥೆ ಮುಂದಿನ ಯೋಜನೆಯಿದೆ, ಕೊಡಗಿನ ಕಾಫೀ ಬೆಳೆಗಾರರ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಇವೆ,  ಜನಸಾಮಾನ್ಯರೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ತಂತ್ರಜ್ಞಾನವನ್ನು ಉಪಯೋಗಿಸಿ ” ಈ ನೋಟೀಸ್ ಕ್ಯೂರ್ ಕೋಡ್” ಬಳಸಿ ಸಮಸ್ಯೆ ತಿಳಿಸಬಹುದಾದ ವ್ಯವಸ್ಥೆ ಮಾಡಲಾಗುತ್ತದೆ,ಮುಂದೆ ಮಡಿಕೇರಿಯಲ್ಲೂ ಕಚೇರಿ ತೆರೆದು,ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ,ಮುಂದಿನ ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿಯವ ಚಿಂತನೆಯಂತೆ  2047 ರ ಹೊತ್ತಿಗೆ ಭಾರತ ಶೇಷ್ಟ ಭಾರತವಾಗುತ್ತ ಸಾಗಲು ಎಲ್ಲರೂ ಸಹಕಾರಬೇಕಾಗಿದೆ, ಕೊಡಗು ಮೈಸೂರು ಮಾದರೀ ಕ್ಷೇತ್ರವಾಗಿಸುವ ಗುರಿ ಹೊಂದೆದ್ದೇನೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಮಾಜೀ ಸಭಾಪತಿ ಕೆ ಜಿ ಭೋಪಯ್ಯ ಮಾತನಾಡಿ ಇಲ್ಲಿನ ಆಡಳಿತದ ಕ್ರೀಯಾ ಶೀಲತೆಯಿಂದ ಸಂಸ್ಥೆ ಗಟ್ಟಿಯಾಗಿ ಬೆಳೆದು ನಿಂತಿದೆ, ಸರಕಾರಗಳಿಂದ ಸಹಕಾರಿ ಸಂಘಗಳಿಗೆ  ಸ್ವಾಯುಕ್ತತೆ ಕೊಡುವ ಕೆಲಸವಾಗಬೇಕಾಗಿದೆ,ರೈತರಿಗೆ ಸಾಲಗಳನ್ನು

ಸಹಕಾರಿ ಸಂಘಗಳು ಸುಲಭವಾಗಿ ನೀಡುತ್ತಿದ್ದು, ಸಹಕಾರಿ ಕ್ಷೇತ್ರ ಗಟ್ಟಿಯಾದರೆ ಮಾತ್ರ  ರೈತರ ಬಾಳು ಸುಗಮವಾಗುತ್ತದೆ ಎಂದು ಹೇಳಿದರು.

ನೂತನ ಪ್ರವೇಶ ದ್ವಾರವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೊಂಡದೇರ ಗಣಪತಿ ಮಾತನಾಡಿ 115 ವರ್ಷಗಳ ಹಿಂದೆ ಹಿರಿಯರು ನಡೆಸಿದ ಚಿಂತನೆಯ  ಪ್ರತಿಫಲ ನಮಗೆ ದೊರೆಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅಧ್ಯಕ್ಷತೆ ವಹಿಸಿ  ಸ್ವಾಗತಿಸಿದರು, ವೇದಿಕೆಯಲ್ಲಿ ಮಂಗಳೂರು ಕ್ಯಾಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಾಲಚಂದ್ರ, ಕೊಡಗು ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ. ಅನಂತ ಊರುಬೈಲು,ಮರ್ಗೋಡು ಸಹಕಾರಿ ಸಂಘದ ಅಧ್ಯಕ್ಷ ಕಾಂಗೀರ ಅಶ್ವಿನ್ ಸತೀಶ್ ಪೆರಾಜೆ ಸಹಕಾರಿ ಸಂಘದ ಉಪಾಧ್ಯಕ್ಷ ಅಶೋಕ್ ಪಿ‌.ಎಂ., ಗ್ರಾ.ಪಂ. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಉಪಸ್ಥಿತರಿದ್ದರು, ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ವಂದನಾರ್ಪಣೆ ಸಲ್ಲಿಸಿದರು, ಮನೋಜ್ ನಿಡ್ಯಮಲೆ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯ