ರಾಜಕೀಯ ಪಕ್ಷಗಳಲ್ಲಿನ ಮಹಿಳಾ ದೌರ್ಜನ್ಯಗಳು ತನಿಖೆಯಾಗಬೇಕು BJP ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ

ರಾಜಕೀಯ ಪಕ್ಷಗಳಲ್ಲಿನ ಮಹಿಳಾ ದೌರ್ಜನ್ಯಗಳು ತನಿಖೆಯಾಗಬೇಕು BJP ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ

.

ಮಂಗಳೂರು: ಸಿನಿಮಾ ರಂಗದಲ್ಲಿರುವ ಹಾಗೆ ರಾಜಕೀಯ ಪಕ್ಷಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಆಗಿದ್ದರೆ ತನಿಖೆಯಾಗಬೇಕು. ತೊಂದರೆಗೀಡಾದ ಮಹಿಳೆಯರು ಹೊರಗೆ ಬಂದು ಪ್ರತಿಭಟಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಹಿಳೆ ಯಾರ ಸರಕೂ ಅಲ್ಲ, ಅವಳು ಸಮಾಜಕ್ಕೋಸ್ಕರ ದುಡಿಯಬೇಕು ಎಂದು ರಾಜಕೀಯ ಪಕ್ಷಕ್ಕೆ ಬರುತ್ತಾಳೆ. ಸಮಾಜಕ್ಕೋಸ್ಕರ ಆಡಳಿತದ ಭಾಗವಾಗಿ ಕೆಲಸ ಮಾಡಲು ರಾಜಕೀಯಕ್ಕೆ ಬರುತ್ತಾಳೆ. ಅಂಥ ಸಂದರ್ಭದಲ್ಲಿ ಅವಳ ಮೇಲೆ ದೌರ್ಜನ್ಯ ಆದರೆ ಮೊದಲು ಅದನ್ನ ಪ್ರತಿಭಟಿಸಬೇಕು ಎಂದರು.

ರಾಜಕೀಯದಲ್ಲಿ ಇದ್ದರೂ ಇಂಥದ್ದನ್ನ ಹೊರಗೆ ತಂದರೆ ಮಾತ್ರ ಎಲ್ಲಾ ಪಕ್ಷಗಳು ಮಹಿಳೆಯರ ಸುರಕ್ಷತೆ ಬಗ್ಗೆ ಕ್ರಮ ವಹಿಸುತ್ತೆ. ಯಾವುದೇ ಪಕ್ಷ ಇದ್ದರೂ ಮಹಿಳೆಯರು ದೌರ್ಜನ್ಯದ ಬಗ್ಗೆ ಧ್ವನಿ ಎತ್ತಬೇಕು. ಮಿ ಟೂ ಕರ್ನಾಟಕ ರಾಜಕಾರಣದಲ್ಲಿದ್ದರೂ ಲೈಂಗಿಕ ದೌರ್ಜನ್ಯ ಇದ್ದಲ್ಲಿ ಅದನ್ನು ಹೊರತಂದು ಹೋರಾಟ ಮಾಡಬೇಕು. ಒಂದು ರಾಜಕೀಯ ಪಕ್ಷ ಬೆಳೆಯುತ್ತ ಹೋದ ಅದರಲ್ಲಿ ಎಲ್ಲಾ ರೀತಿಯ ಜನರು ಬರುತ್ತಾರೆ. ಎಲ್ಲಾ ಕಡೆ ದುರ್ಯೋಧನ, ದುಷ್ಯಾಸನರಿದ್ದಾರೆ. ಲೈಂಗಿಕ ದೌರ್ಜನ್ಯ ಇದ್ದಲ್ಲಿ ಅದನ್ನು ಹೊರತಂದು ಹೋರಾಟ ಮಾಡಬೇಕು ಇಲ್ಲವಾದಲ್ಲಿ ಇವರ ಅಟ್ಟಹಾಸ ನಿಲ್ಲೋದಿಲ್ಲ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಸದ್ದಿನ ಬಗ್ಗೆ ಮಾತನಾಡಿದ ಅವರು ಇನ್ನೂ ಹೆಚ್ಚು ಕಲಾವಿದರು ಇದಕ್ಕೆ ಸಹಿ ಮಾಡಬೇಕು ಈ ನಡೆಯನ್ನ ನಾನು ಸ್ವಾಗತ ಮಾಡುತ್ತೇನೆಂದ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಕೇವಲ 150 ಕಲಾವಿದರು ಅಲ್ಲ ಇನ್ನು ಸಾಕಷ್ಟು ಕಲಾವಿದರು ಇದ್ದಾರೆ. ವರ್ಕಿಂಗ್ ಪ್ಲೇಸ್ ಹ್ಯಾರಸ್ ಮೆಂಟ್ ಕಮಿಟಿ ಇದನ್ನ ತನಿಖೆ ಮಾಡಬೇಕು ಜೊತೆಗೆ ಹಾಲಿ ಹೈಕೋರ್ಟ್ ನ ಸುಪರ್ದಿಯಲ್ಲಿ ನಿವೃತ್ತ ನ್ಯಾಯ ಮೂರ್ತಿ ಇದರ ಬಗ್ಗೆ ತನಿಖೆ ಮಾಡಲಿ ಅನ್ನೋದು ನನ್ನ ಮನವಿಯಾಗಿದೆ ಎಂದರು

ರಾಜ್ಯ