ಸುಳ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆಯವರಿಂದ ಪತ್ರಕರ್ತರೊಂದಿಗೆ ಮಾಧ್ಯಮ ಸಂವಾದ.

ಸುಳ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆಯವರಿಂದ ಪತ್ರಕರ್ತರೊಂದಿಗೆ ಮಾಧ್ಯಮ ಸಂವಾದ.

ಶತಮಾನ ಕಂಡ ಶಾಲೆಗಳೂ ಕೂಡ ಅಭಿವೃದ್ದಿಯಲ್ಲಿ ಹಿಂದೆ ಇರುವುದು ಕೂಡ ಕನ್ನಡ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆ ಯಾಗಲು ಕಾರಣ, ಮಕ್ಕಳಿಗೆ 5 ನೇ ತರಗತಿ ವರೆಗೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕಾದ ಅಗತ್ಯತೆ ಇದೆ , ಆಂಗ್ಲ ಶಿಕ್ಷಣ ಕಲಿಕೆಯಿಂದ ಉದ್ಯೋಗ ಗ್ಯಾರಂಟಿ ಎಂಭ ಭ್ರಮೆ  ಹಲವು ಪೋಷಕರಲ್ಲಿದೆ, ಇಂದು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರೂ ಶೇ 50ರಷ್ಟು ಮಂದಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆಯವರು ಹೇಳಿದ್ದಾರೆ ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರೊಡನೆ ನಡೆದ ಮಾಧ್ಯಮ ಸಂವಾದದಲ್ಲಿ ಕನ್ನಡ ಬಗೆಗಿನ ತನ್ನ ತುಡಿತವನ್ನು ಭಹಿರಂಗ ಪಡಿಸಿದ್ದಾರೆ.

ಕನ್ನಡವನ್ನು ಕರ್ನಾಟಕದಲ್ಲಿ ಬಲಿಷ್ಠ ಗೊಳಿಸುವುದು ಪ್ರಾಧಿಕಾರದ ಉದ್ದೇಶ. ಆ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಸರಕಾರಗಳು ನೀಡಿದ ಆದೇಶಗಳು ಅನುಷ್ಠಾನಕ್ಕೆ ಬಂದಿದೆಯೋ ಎಂದು ನೋಡುವುದು ಪ್ರಾಧಿಕಾರದ ಜವಾಬ್ದಾರಿಯಾಗಿದೆ. ಕರ್ನಾಟಕದಲ್ಲಿ ಶೇ.60 ರಷ್ಟು‌ ಕನ್ನಡ ನಾಮಫಲಕ ಕಡ್ಡಾಯ ಎಂದು ಸರಕಾರದ ಆದೇಶ ಮಾಡಿದ್ದು. ಇದು ಸರಿಯಾಗಿ ಅನುಷ್ಠಾನಗೊಂಡಿದೆಯೋ ಎಂದು ಪರೀಶೀಲಿಸಿದ್ದೇವೆ, ಸರಕಾರದ ಆದೇಶಗಳನ್ನು ಅಧಿಕಾರಿಗಳು ಅನುಷ್ಠಾನಕ್ಕೆ ತಾರದೇ ಇದ್ದಾಗ ಅವರಿಗೆ ತಿಳಿಸಿ ಅನುಷ್ಠಾನ ಮಾಡುವಂತೆ ಮಾಡೋದು ನಮ್ಮ ಕೆಲಸ ಎಂದವರು ವಿವರ ನೀಡಿದರು.

ಕನ್ನಡ ಶಾಲೆಗಳಲ್ಲಿ ದುಡಿಯುತ್ತಿರುವ ಅತಿಥಿ ಶಿಕ್ಷಕರ ವೇತನ  ತಿಂಗಳಿಗೆ ಸರಿಯಾಗಿ  ದೊರೆಯದೆ ಇರುವುದು ಶಿಕ್ಷಕರ ಸ್ಥೈರ್ಯ ಕುಗ್ಗಿಸಿದಂತಾಗುತ್ತದೆ , ವೇತನ ಸರಿಯಾಗಿ ದೊರೆಯಲು ಸರಕಾರದ ಗಮನಕ್ಕೆ ತರಲು ಸಲಹೆ ಬಂದ ಹಿನ್ನಲೆ, ವೇತನ ವಿಚಾರವನ್ನು   ಸರಕಾರದ ಗಮನಕ್ಕೆ ತರುವ ಭರವಸೆಯನ್ನು ಡಾ| ಪುರುಷೋತ್ತಮ ನೀಡಿದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ‌ಬಂಟ್ವಾಳ್ ಸ್ವಾಗತಿಸಿ,, ಪ್ರಾಸ್ತಾವಿಕ ಮಾತನಾಡಿದರು.

ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು, ನಿವೃತ್ತ ಪ್ರಾಂಶುಪಾಲ ಪೂವಪ್ಪ ಕಣಿಯೂರು, ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ ಹಾಗೂ ಪತ್ರಕರ್ತರು ಕಾರ್ಯಕ್ರಮದಲ್ಲಿ ಇದ್ದರು

ರಾಜ್ಯ