
ಕೊಡಗು ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಹಲವು ಕಡೆ ಬರೆ ಕುಸಿದು ಹಾನಿಯಾಗುತ್ತಿರುವ ಘಟನೆ ವರದಿಯಾಗುತ್ತಿದೆ,ಗಡಿ ಗ್ರಾಮ ಪೆರಾಜೆಯಲ್ಲಿ ಹಲವು ಕಡೆಗಳಲ್ಲಿ ಹಾನಿ ಉಂಟಾಗಿದೆ, ಚಾಮಕಜೆ, ನಿಡ್ಯಮಲೆ ರಸ್ತೆ ಸಂಪರ್ಕ ಕಡಿತ ಉಂಟಾಗಿದೆ, ಚಾಮಕಜೆ ಕುಶಾಲಪ್ಪ ಎಂಬವರ ಮನೆಗೆ ಮಣ್ಣು ಕುಸಿದು ಹಾನಿಯಾಗಿದೆ , ನಿಡ್ಯಮಲೆ , ಮಜಿಕೋಡಿ ಭಾಗದಲ್ಲಿ ಗುಡ್ಡ ಕುಸಿದು ಪಂಪ್ ಸೇರಿದಂತೆ ಶೆಡ್ ಸಂಪೂರ್ಣ ಹಾನಿಯಾಗಿದೆ, ಕೂರ್ನಡ್ಕದಿಂದ ಪೆರಾಜೆ ಸಂಪರ್ಕಿಸುವ ಕಾಲು ಸಂಕ ಮುಳುಗಡೆಯಾಗಿದ್ದು ,ರಸ್ತೆ ಮಳೆ ನೀರಿಗೆ ಕೊಚ್ಚಿ ಹೋಗಿದ್ದು ಸಂಪರ್ಕ ಕಡಿತಗೊಂಡಿದೆ.





