
ರಾತ್ರಿ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಎರಡು ದನಗಳನ್ನು ಕಳ್ಳರು ಕದ್ದೊಯ್ದ ಘಟನೆ ದ.ಕ. ಸಂಪಾಜೆ ಗ್ರಾಮದ ಚೌಕಿಯಲ್ಲಿ ಜು.25ರಂದು ರಾತ್ರಿ ಸಂಭವಿಸಿದೆ.


ಸಂಪಾಜೆಯ ವಕೀಲರಾದ ಪುಷ್ಪರಾಜ್ ಗಾಂಭೀರ ಅವರ ಮನೆಯ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ಎರಡು ದನಗಳನ್ನು ರಾತ್ರಿವೇಳೆ ಕಳ್ಳರು ಕದ್ದೊಯ್ದಿದ್ದು , ಪುಷ್ಪರಾಜ್ ಅವರು ಬೆಳಗ್ಗೆ ಎದ್ದು ನೋಡಿದಾಗ ದನ ಕಳ್ಳತನವಾಗಿರುವ ಘಟನೆ ತಿಳಿದಿದ್ದು, ಅವರು ಕಲ್ಲುಗುಂಡಿ ಪೊಲೀಸ್ ಹೊರಠಾಣೆಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.
ಕೇಸು ದಾಖಲಿಸಿಕೊಂಡ ಪೊಲೀಸರು ಜು.26ರಂದು ಬೆಳಿಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.
ಸಂಪಾಜೆ ಗ್ರಾಮದಲ್ಲಿ ದಿನೇ ದಿನೇ ದನ ಕಳ್ಳತನ ವಾಗುತ್ತಿದ್ದು ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ದನವನ್ನು ಸಾಗಿಸಲಾಗುತ್ತಿದೆ, ಅಲ್ಲದೆ ಹೊರ ಠಾಣೆಯ ಸಮೀಪದಲ್ಲಿ ಘಟನೆ ನಡೆಯುತ್ತಿದ್ದು ಜನರು ಆತಂಕ ವ್ಯಕ್ತಪಡಿಸಿದ್ದಾರೆ, ಹಲವು ಕಡೆಗಳಲ್ಲಿ ಸಿ ಸಿ ಕ್ಯಾಮರಾ ಇದ್ದರು ದನ ಕಳ್ಳರ ಪತ್ತೆ ಹಚ್ಚಲಾಗದ ಇಲಾಖೆಯ ಬಗ್ಗೆ ಗ್ರಾಮಸ್ಥರು ಅಸಮದಾನ ವ್ಯಕ್ತಪಡಿಸಿದ್ದಾರೆ.