ಲಾಯಿಲ: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ನಡ ಗ್ರಾಮ ಸಹಾಯಕ ಮೃತ್ಯು .

ಲಾಯಿಲ: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ನಡ ಗ್ರಾಮ ಸಹಾಯಕ ಮೃತ್ಯು .

ನಡ: ಲಾಯಿಲ ಪುತ್ರಬೈಲು ನಲ್ಲಿ ಬೈಕ್ ಹಾಗೂ ಖಾಸಗಿ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ತ್ರೀವ ಗಾಯಗೊಂಡು ಬೈಕ್ ಸವಾರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನಪ್ಪಿದ್ದ ಘಟನೆ ಜೂ.28 ರಂದು ಬೆಳಿಗ್ಗೆ ನಡೆದಿದೆ.

ಬೈಕ್ ಸವಾರ ಬಳಂಜ ನಿವಾಸಿಯಾಗಿದ್ದು ನಡ ಗ್ರಾಮಕರಣಿಕರ ಕಚೇರಿ ಸಹಾಯಕ (ಉಗ್ರಾಣಿ) ಅವಿವಾಹಿತ ಜಯರಾಜ್(45) ಎಂದು ತಿಳಿದುಬಂದಿದೆ.

ಬೈಕ್ ಸವಾರ ಜಯರಾಜ್ ರವರು ಬೆಳ್ತಂಗಡಿ ಕಡೆಯಿಂದ ನಡ ಕಚೇರಿಗೆ ತೆರಳುತ್ತಿದ್ದು ಬಸ್ಸು ಕಿಲ್ಲೂರಿನಿಂದ ಬೆಳ್ತಂಗಡಿಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಜಯರಾಜ್ ರವರಿಗೆ ತ್ರೀವ ಗಾಯಗೊಂಡು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

ರಾಜ್ಯ