ಟಿ20 ವಿಶ್ವಕಪ್ ಕ್ರಿಕೆಟ್ ಅಲ್ಪ ಮೊತ್ತದ ಪಂದ್ಯದಲ್ಲಿ ಭಾರತ ತಂಡಕ್ಕೆ ಪಾಕಿಸ್ತಾನದ ವಿರುದ್ಧ ರೋಚಕ ಜಯ

ಟಿ20 ವಿಶ್ವಕಪ್ ಕ್ರಿಕೆಟ್ ಅಲ್ಪ ಮೊತ್ತದ ಪಂದ್ಯದಲ್ಲಿ ಭಾರತ ತಂಡಕ್ಕೆ ಪಾಕಿಸ್ತಾನದ ವಿರುದ್ಧ ರೋಚಕ ಜಯ

ಸ್ಟಾರ್ ಆಟಗಾರರ ವೈಫಲ್ಯದಿಂದ ಅಲ್ಪ ಮೊತ್ತದ ಗುರಿಯನ್ನು ನೀಡಿದ್ದ ಭಾರತ ತಂಡಕ್ಕೆ ರೋಚಕ ಜಯ ಲಭಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕೇವಲ 120 ರನ್ ಗಳ ಸಾಧಾರಣ ಗುರಿಯನ್ನು ಎದುರಾಳಿ ಪಾಕಿಸ್ತಾನ ತಂಡಕ್ಕೆ ನೀಡಿತ್ತು. ಸುಲಭ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ತಂಡ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲ್ಲುವ ವಿಶ್ವಾಸದಲ್ಲಿತ್ತು ಆದರೆ ಕೊನೆಯ ಓವರ್ ನಲ್ಲಿ ಗೆಲ್ಲಲು 19 ಬೇಕಾಗಿತ್ತು ಕೊನೆಯ ಓವರ್ ಎಸೆದ ಹರ್ಷದೀಪ್ ಪಾಕಿಸ್ತಾನದ ಗೆಲ್ಲುವ ಕನಸನ್ನು ನಿರಾಸೆ ಗೊಳಿಸಿದರು. ಅಂತಿಮವಾಗಿ ಭಾರತ ತಂಡ 6 ರನ್ ಗಳ ಜಯ ಸಾಧಿಸಿತು. ಭಾರತದ ಪರ ಬೂಮ್ರ 3 ಮತ್ತು ಹಾರ್ದಿಕ್ ಪಾಂಡ್ಯ 2. ಹರ್ಷ ದೀಪ್ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು. 3 ವಿಕೆಟ್ ಪಡೆದ ಬೂಮ್ರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಕ್ರೀಡೆ