ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿದ ಭಾರತ. ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯದಲ್ಲಿ ಪ್ರಮುಖ ಬ್ಯಾಟ್ಸ್ಮನ್ ಗಳ ಕಳಪೆ ಪ್ರದರ್ಶನದಿಂದಾಗಿ ಭಾರತ ಕೇವಲ 119 ರನ್ ಗಳನ್ನು ಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 12 ರನ್ ಗಳಿಸುವಷ್ಟರಲ್ಲಿ ವಿರಾಟ್ ಕೋಹ್ಲಿಯ ವಿಕೆಟನ್ನು ಕಳೆದುಕೊಂಡಿತು 3 ಎಸೆತದಲ್ಲಿ ಕೇವಲ 4 ರನ್ ಗಳಿಸಿ ಔಟ್ ಆದ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದರು. ನಂತರ ಹೆಚ್ಚು ಹೊತ್ತು ನಿಲ್ಲದ ರೋಹಿತ್ ಶರ್ಮ ಕೂಡ 12 ಎಸೆತದಲ್ಲಿ 13 ರನ್ ಗಳಿಸಿ ಔಟಾದರು. ನಂತರ ಬಂದ ಅಕ್ಷರ್ ಪಟೇಲ್ ಮತ್ತು ರಿಷಬ್ ಪಂತ್ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಆಸರೆಯಾದರು. ಅಕ್ಷರ್ ಪಟೇಲ್ 18 ಎಸೆತದಲ್ಲಿ 20 ರನ್ ಗಳಿಸಿದರೆ ಪಂತ್ 31 ಎಸೆತದಲ್ಲಿ 42 ರನ್ ಗಳಿಸಿ ಔಟಾದರು. ನಂತರ ಬಂದ ಎಲ್ಲಾ ಆಟಗಾರರು ಕಳಪೆ ಪ್ರದರ್ಶನ ನೀಡಿ ಭಾರತ ತಂಡದ ಕೇವಲ 119 ರನ್ ಗಳಿಸಿ ಅಲ್ ಔಟ್ ಆಯಿತು.ಪಾಕಿಸ್ತಾನ ಪರ ಹ್ಯಾರಿಸ್ ರೌಪ್ ಮತ್ತು ನಸೀಮ್ ಶಾ ತಲಾ 3 ವಿಕೆಟ್ ಕಬಳಿಸಿದರು. ಪಾಕಿಸ್ತಾನ ಗೆಲ್ಲಲು 120 ರನ್ ಗಲಿಸಬೇಕಾಗಿದ್ದು ಭಾರತ ತಂಡ ಉತ್ತಮ ಬೌಲಿಂಗ್ ನಡೆಸಿದರೆ ಮಾತ್ರ ಈ ಪಂದ್ಯ ಗೆಲ್ಲುವ ಅವಕಾಶವಿದೆ.


