ಗ್ಯಾರೆಂಟಿ ಯೋಜನೆ ನಿಲ್ಲಿಸುವುದು ಒಳ್ಳೆಯದು: ಮೈಸೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ ಕಾಂಗ್ರೆಸ್ ಮುಖಂಡ ಎಂ.ಲಕ್ಷ್ಮಣ್..!

ಗ್ಯಾರೆಂಟಿ ಯೋಜನೆ ನಿಲ್ಲಿಸುವುದು ಒಳ್ಳೆಯದು: ಮೈಸೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ ಕಾಂಗ್ರೆಸ್ ಮುಖಂಡ ಎಂ.ಲಕ್ಷ್ಮಣ್..!

ಮೈಸೂರು:  ಜನರಿಗೆ ಕಾಂಗ್ರೆಸ್ ಗ್ಯಾರೆಂಟಿ ಇಷ್ಟವಾಗಿಲ್ಲ, ಹಾಗಾಗಿ ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆ ನಿಲ್ಲಿಸುವುದು ಒಳ್ಳೆಯದು ಎಂದು  ಎಂ.ಲಕ್ಷ್ಮಣ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,   ಗ್ಯಾರೆಂಟಿ ಇಷ್ಟವಿಲ್ಲ ಎಂದು ಫಲಿತಾಂಶ ಮೂಲಕ ತೋರಿಸಿಕೊಟ್ಟಿದ್ದಾರೆ. ಬಿಜೆಪಿಗರು ಗ್ಯಾರೆಂಟಿ ವಿರುದ್ಧ ಮಾತನಾಡಿದರೂ ಜನ ಬೆಂಬಲಿಸಿದ್ದಾರೆ, ಹಾಗಾಗಿ ನಮ್ಮ ಗ್ಯಾರೆಂಟಿ ಅವರಿಗೆ ಇಷ್ಟವಾಗಿಲ್ಲ ಅಂತಾನೆ ಅಲ್ವಾ ಎಂದು ಲಕ್ಷ್ಮಣ್ ಹೇಳಿದರಲ್ಲದೇ,  ಈ ಬಗ್ಗೆ ಮುಖ್ಯಮಂತ್ರಿಗಳು ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಗ್ಯಾರೆಂಟಿ ಹಣದಿಂದಲೇ ಜೀವನ ನಡೆಸುವ ಜನರನ್ನು ನೋಡಿ ಗ್ಯಾರೆಂಟಿ ರೀ ಲುಕ್ ಮಾಡುವ ಅಗತ್ಯವಿದೆ. 25 ಸಾವಿರ ರೂಪಾಯಿ ಸಂಬಳ ಪಡೆಯುವ ವ್ಯಕ್ತಿಗೆ ಫ್ರೀ ಕರೆಂಟ್ ಕೊಟ್ಟರೆ ಹೇಗೆ? ಎಂದು ಅವರು ಪ್ರಶ್ನಿಸಿದರಲ್ಲದೇ ಶೇ.70ರಷ್ಟು ಮೇಲ್ವರ್ಗಗಳು ಗ್ಯಾರೆಂಟಿಯ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಐದು ರೂಪಾಯಿ ಕೊಟ್ಟಿದ್ರಾ? ಆದರೆ ಸಿದ್ದರಾಮಯ್ಯ ಎಷ್ಟು ಕೆಲಸ ಮಾಡಿದ್ದಾರೆ.  ಜಯದೇವ ಆಸ್ಪತ್ರೆ ಸೇರಿದಂತೆ ಮೈಸೂರಿಗೆ ಎಷ್ಟು ಕೊಡುಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರಂಥ ಕ್ಲೀನ್ ಇಮೇಜ್ ಇರುವ ಸಿಎಂ ದೇಶದಲ್ಲಿ ಬೇರೆ ಎಲ್ಲಾದ್ರೂ ಇದ್ದಾರಾ?  ಎಂದು ಪ್ರಶ್ನಿಸಿದ ಅವರು, ಮೈಸೂರಿನ ಜನ ಸಿದ್ದರಾಮಯ್ಯನವರಿಗೆ ಎಷ್ಟು ನೋವು ಕೊಡ್ತೀರಿ ಎಂದು  ಬೇಸರ ವ್ಯಕ್ತಪಡಿಸಿದರು.

ರಾಜ್ಯ