ಶೋರೂಮಿನಿಂದ ತಂದು ಗಾಂಧಿನಗರದಲ್ಲಿ ನಿಲ್ಲಿಸಿದ್ದ ಹೊಸ ಆಟೋ ರಿಕ್ಷಕ್ಕೆ ಕಾರು ಡಿಕ್ಕಿ : ವಾಹನ ಜಖಂ

ಶೋರೂಮಿನಿಂದ ತಂದು ಗಾಂಧಿನಗರದಲ್ಲಿ ನಿಲ್ಲಿಸಿದ್ದ ಹೊಸ ಆಟೋ ರಿಕ್ಷಕ್ಕೆ ಕಾರು ಡಿಕ್ಕಿ : ವಾಹನ ಜಖಂ

  

ಸುಳ್ಯ : ನಗರದ ಗಾಂಧಿನಗರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಶೋರೂಮಿನಿಂದ ತಂದಂತಹ ಹೊಸ ಆಟೋರಿಕ್ಷಾ ವೊಂದಕ್ಕೆ ಕಾರುಡಿಕ್ಕಿಯಾಗಿ ಎರಡು ವಾಹನಗಳು  ಜಖಂ ಗೊಂಡ ಘಟನೆ ಇಂದು ಸುಳ್ಯದಲ್ಲಿ ನಡೆದಿದೆ.

 ಉಭರಡ್ಕ ನಿವಾಸಿಯಿಬ್ಬರು ಹಳೆಗೇಟು ಶೋರೂಮಿನಿಂದ ಹೊಸ ಆಟೋರಿಕ್ಷವನ್ನು ಖರೀದಿಸಿ ಉಭರಡ್ಕ ಹೋಗುವ ವೇಳೆ ಗಾಂಧಿನಗರ ರಸ್ತೆ ಬದಿಯಲ್ಲಿ ನಿಲ್ಲಿಸಿ ಪಕ್ಕದ ಪುಸ್ತಕದ ಅಂಗಡಿಗೆ ಪುಸ್ತಕ ತರಲೆಂದು ಹೋಗಿದ್ದರು ಎನ್ನಲಾಗಿದೆ.

 ಈ ವೇಳೆ ಗಾಂಧಿನಗರದ ಕಡೆಯಿಂದ ಬರುತ್ತಿದ್ದ ಉಭರಡ್ಕ ಗ್ರಾಮ ಪಂಚಾಯತಿ ಸದಸ್ಯ ಚಲಾಯಿಸಿಕೊಂಡು ಬರುತ್ತಿದ್ದ ಆಲ್ಟೊ ಕಾರು ರಿಕ್ಷಾಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಸಂಭವಿಸಿದ ಬಳಿಕ ಕಾರು ಸವಾರ ನಿಲ್ಲಿಸದೆ ಮುಂದಕ್ಕೆ ಸಾಗಿ ಪೊಲೀಸ್ ಠಾಣೆಯಲ್ಲಿ ಕೊಂಡು ಹೋಗಿ ನಿಲ್ಲಿಸಿದ್ದಾರೆ. ಅಲ್ಲಿಗೆ ಬಂದ ಆಟೋ ಚಾಲಕ ಠಾಣೆಗೆ ತೆರಳಿ ಘಟನೆಯ ಬಗ್ಗೆ ವಿವರವನ್ನು ತಿಳಿಸಿದ್ದಾರೆ.

ರಾಜ್ಯ