ಕೊಟ್ಟಿಗೆಗೆ ನುಗ್ಗಿ ಆಡು ಹೊತ್ತೊಯ್ದ ಚಿರತೆ : 

ಕೊಟ್ಟಿಗೆಗೆ ನುಗ್ಗಿ ಆಡು ಹೊತ್ತೊಯ್ದ ಚಿರತೆ : 

:   ರಾತ್ರಿ ಕೊಟ್ಟಿಗೆಗೆ ನುಗ್ಗಿದ ಚಿರತೆ ಕಟ್ಟಿ ಹಾಕಿದ್ದ ನಾಲ್ಕು ಆಡುಗಳ ಪೈಕಿ ಒಂದು ಆಡನ್ನು ಕೊಂದು ಹಾಕಿ ಮತ್ತೊಂದನ್ನು ಹೊತ್ತೊಯ್ದಿದಿರುವ ಘಟನೆ ಬೆಳ್ತಂಗಡಿಯ ಕೊಯ್ಯೂರು ಗ್ರಾಮದಲ್ಲಿ ನಡೆದಿದೆ.

ಕೊಯ್ಯೂರು ಗ್ರಾಮದ ಮದರಸ ಬಳಿಯ ಮೊಹಮ್ಮದ್ ಎಂಬವರು ನಾಲ್ಕು ಆಡು ಸಾಕುತ್ತಿದ್ದರು.  ಮನೆಯ ಕೊಟ್ಟಿಗೆಯಲ್ಲಿ ಆಡುಗಳನ್ನು ಕಟ್ಟಿ ಹಾಕಿದ್ದ ವೇಳೆ ಜೂ.5ರಂದು ರಾತ್ರಿ ಕೊಟ್ಟಿಗೆಗೆ ಚಿರತೆ ದಾಳಿ ಮಾಡಿದೆ.

ಚಿರತೆ ದಾಳಿಗೆ ಒಂದು ಆಡು ಸಾವನ್ನಪ್ಪಿದ್ದು. ಒಂದು ಆಡುವನ್ನು ಚಿರತೆ ಹೊತ್ತೊಯ್ಯಿದಿದೆ ಎನ್ನಲಾಗಿದೆ.ಇದರಿಂದ ಗ್ರಾಮದಲ್ಲಿ ಆತಂಕ ಎದುರಾಗಿದೆ.

ರಾಜ್ಯ