
ನೆಲ್ಯಾಡಿ, ಜೂ.05. ಬೈಕ್ ಹಾಗೂ ಮಹೀಂದ್ರಾ ಎಕ್ಸ್’ಯುವಿ 700 ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್‌ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಉದನೆ ಸಮೀಪದ ನೇಲ್ಯಡ್ಕ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.



ಮೃತ ಸವಾರನನ್ನು ಉದನೆ ಸಮೀಪದ ನೇಲ್ಯಡ್ಕ ನಾಳಾಲು ನಿವಾಸಿ ರವಿ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮಹೀಂದ್ರಾ ಎಕ್ಸ್’ಯುವಿ 700 ಕಾರು ಹಾಗೂ ಬೈಕ್ ನಡುವೆ ನೇಲ್ಯಡ್ಕ ಸಮೀಪ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ಇನ್ನಷೇ ತಿಳಿದು ಬರಬೇಕಿದೆ.
