ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ : ಒಂದು ಲಕ್ಷ ಮತಗಳ ಲೀಡ್‌ ಪಡೆದ ಚೌಟ :ಇನ್ನು 6 ಲಕ್ಷ ಮತಗಳ ಎಣಿಕೆ ಬಾಕಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ : ಒಂದು ಲಕ್ಷ ಮತಗಳ ಲೀಡ್‌ ಪಡೆದ ಚೌಟ :ಇನ್ನು 6 ಲಕ್ಷ ಮತಗಳ ಎಣಿಕೆ ಬಾಕಿ

 

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದೆ. ಈಗಾಗಲೇ 5 ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು  ಬಿಜೆಪಿ ಅಭ್ಯರ್ಥಿ  ಬ್ರಿಜೇಶ್‌ ಚೌಟ ತನ್ನ ಹತಿರದ ಸ್ಪರ್ಧಿ ಕಾಂಗ್ರೆಸ್‌ ನ ಪದ್ಮರಾಜ್‌ ಆರ್‌ ಪೂಜಾರಿ ಗಿಂತ  98,290  ಮತಗಳಿಂದ ಮುಂದಿದ್ದಾರೆ.

ಸುಮಾರು 8 ಲಕ್ಷ ಮತ ಎಣಿಕೆ ಮುಗಿದಿದ್ದು ಇನ್ನು ಸುಮಾರು 6 ಲಕ್ಷ ಮತಗಳ ಎಣಿಕೆ ಬಾಕಿ ಉಳಿದಿದೆ. ಉಳಿದಿರುವ 6 ಲಕ್ಷ ಮತಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 3.50 ಲಕ್ಷ ಮತಗಳನ್ನು ಪಡೆದರೆ ಮಾತ್ರ ವಿಜಯ ಪತಾಕೆ ಹಾರಿಸಬಹುದು.  

 ದಕ್ಷಿಣ ಕನ್ನಡ

10 ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಬಿಜೆಪಿ ಮುನ್ನಡೆ

ಬ್ರಿಜೇಶ್ ಚೌಟ – ಬಿಜೆಪಿ – 4,27,547

ಪದ್ಮರಾಜ್ ಆರ್ ಪೂಜಾರಿ – ಕಾಂಗ್ರೆಸ್ – 3,29,257

ಅಂತರ – 98,290

ನೋಟಾ – 13,334

ರಾಜ್ಯ