
ಮೈಸೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಮಹಾರಾಜ ಯದುವೀರ್ ಒಡೆಯರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಹಿನ್ನಡೆ ಸಾಧಿಸಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರ
ಮೈಸೂರು ಲೋಕಸಭಾ ಕ್ಷೇತ್ರ:
ಮೊದಲ ಸುತ್ತಿನ ಅಂತ್ಯಕ್ಕೆ
ಯದುವೀರ್ – 64095
ಲಕ್ಷ್ಮಣ್ – 55146
ಬಿಜೆಪಿಗೆ 8949 ಮತಗಳ ಮುನ್ನಡೆ(9:43AM)
ನಿರೀಕ್ಷೆಯಂತೆ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಫಲಿತಾಂಶ ಎಲ್ಲರ ಗಮನ ಸೆಳೆಯುತ್ತಿದೆ. ಬಿಜೆಪಿಯಿಂದ ಮಹಾರಾಜ ಯದುವೀರ್ ಒಡೆಯರ್, ಕಾಂಗ್ರೆಸ್ನಿಂದ ಸಿದ್ದರಾಮಯ್ಯ ಅವರ ಬೆಂಬಲಿಗ ಎಂ.ಲಕ್ಷ್ಮಣ್ ಸ್ಪರ್ಧೆಯಿಂದ ಸದ್ಯದ ಫಲಿತಾಂಶ ಎದೆಬಡಿತ ಹೆಚ್ಚಿಸಿದೆ. ಉಭಯ ಅಭ್ಯರ್ಥಿಗಳಿಗೂ ಮೊದಲ ಚುನಾವಣೆ ಇದಾಗಿದ್ದರಿಂದ ಕ್ಷೇತ್ರದ ಜನರ ಚಿತ್ತ ಇತ್ತ ನೆಟ್ಟಿದೆ.
ಸದ್ಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಮಹಾರಾಜ ಯದುವೀರ್ ಒಡೆಯರ್ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಹಿನ್ನಡೆಯಲ್ಲಿದ್ದಾರೆ. ಇನ್ನು ಹಲವು ಸುತ್ತುಗಳು ಮತ ಎಣಿಕೆಯ ಕಾರ್ಯ ನಡೆಯಬೇಕಿದೆ. ಇನ್ನು ಹಲವು ಸುತ್ತುಗಳಿದ್ದು ಜನ ಯಾರ ಕೈಹಿಡಿಯಲಿದ್ದಾರೆ ಎನ್ನವುದನ್ನು ಕಾದು ನೋಡಬೇಕಿದೆ.
ಚುನಾವಣಾ ಘೋಷಣೆಯಾದ ದಿನದಿಂದ ಉಭಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತದಾರರ ಗಮನ ಸೆಳೆದಿದ್ದರು. ಕೇಸರಿ ಅಭ್ಯರ್ಥಿ ಮಹಾರಾಜ ಯದುವೀರ್ ಒಡೆಯರ್ ಪರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಆದಾಗಿಯಾಗಿ ಪ್ರಚಾರ ನಡೆಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದರು
